ADVERTISEMENT

ನೇಪಾಳ: ಜುಲೈ 21ಕ್ಕೆ ಪ್ರಧಾನಿ ಕೆ.ಪಿ.ಶರ್ಮಾ ಓಲಿ ವಿಶ್ವಾಸ ಮತಯಾಚನೆ

ಪಿಟಿಐ
Published 17 ಜುಲೈ 2024, 16:19 IST
Last Updated 17 ಜುಲೈ 2024, 16:19 IST
ಕೆ.ಪಿ. ಶರ್ಮ ಓಲಿ
ಕೆ.ಪಿ. ಶರ್ಮ ಓಲಿ   

ಕಠ್ಮಂಡು: ನೇಪಾಳದ ನೂತನ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ಜುಲೈ 21ರಂದು ಸಂಸತ್ತಿನಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ.

‘ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಸೋಮವಾರ ಪ್ರಮಾಣ‌ವಚನ ಸ್ವೀಕರಿಸಿದ ಓಲಿ ಅವರು ಸಂವಿಧಾನದ ನಿಯಮದನ್ವಯ ಭಾನುವಾರ ವಿಶ್ವಾಸಮತ ಸಾಬೀತು ಮಾಡಲಿದ್ದಾರೆ’ ಎಂದು ಸಿಪಿಎನ್‌–ಯುಎಮ್‌ಎಲ್‌ ಪಕ್ಷದ ಮುಖ್ಯ ಸಚೇತಕ ಮಹೇಶ್‌ ಬೆರ್ತೌಲ್ ತಿಳಿಸಿದ್ದಾರೆ.

ನೇಪಾಳ ಸಂವಿಧಾನದ ಅನ್ವಯ ನೂತನ ಪ್ರಧಾನಿಯು ಪ್ರಮಾಣವಚನ ಸ್ವೀಕರಿಸಿದ  30 ದಿನಗಳ ಒಳಗಾಗಿ ವಿಶ್ವಾಸಮತ ಸಾಬೀತುಪಡಿಸಬೇಕು. 275 ಸ್ಥಾನಗಳನ್ನು ಹೊಂದಿರುವ ನೇಪಾಳ ಸಂಸತ್ತಿನಲ್ಲಿ ಸರ್ಕಾರ ರಚನೆಗೆ ಕನಿಷ್ಠ 138 ಸದಸ್ಯರ ಬೆಂಬಲದ ಅಗತ್ಯವಿದೆ. 

ADVERTISEMENT

ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ವಿಶ್ವಾಸಮತ ಸಾಬೀತುಪಡಿಸಲು ವಿಫಲರಾದ ಬಳಿಕ ಸಿಪಿಎನ್‌–ಯುಎಮ್‌ಎಲ್ ಮತ್ತು ನೇಪಾಳಿ ಕಾಂಗ್ರೆಸ್‌ ಪಕ್ಷಗಳು ಮೈತ್ರಿ ಸರ್ಕಾರ ರಚಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.