ADVERTISEMENT

ಚಿನ್ನ ಕಳ್ಳಸಾಗಣೆ: ನೇಪಾಳ ಪೊಲೀಸರಿಂದ ಭಾರತೀಯ ಪ್ರಜೆಯ ಬಂಧನ

ಪಿಟಿಐ
Published 17 ಜೂನ್ 2024, 15:18 IST
Last Updated 17 ಜೂನ್ 2024, 15:18 IST
   

ಕಠ್ಮಂಡು: ಕಠ್ಮಂಡುವಿನಲ್ಲಿ ಪ್ರತ್ಯೇಕ ಚಿನ್ನ ಕಳ್ಳಸಾಗಣೆ ಪ್ರಕರಣಗಳಿಗೆ ಸಂಬಂಧಿಸಿ, ಭಾರತ ಮತ್ತು ಚೀನಾ ಮೂಲದ ಇಬ್ಬರು ಪ್ರಜೆಗಳನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. 

ಬ್ಯಾಂಕಾಕ್‌ನಿಂದ ಥಾಯ್ ಏರ್‌ಲೈನ್ಸ್ ಮೂಲಕ ಶನಿವಾರ ಸಂಜೆ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ 43 ವರ್ಷದ ಭಾರತೀಯ ಪ್ರಜೆ ನಿತಿನ್ ಮಹೇಶ್ವರಿ ಭದ್ರತಾ ತಪಾಸಣೆಯ ವೇಳೆ ಅಕ್ರಮವಾಗಿ 89 ಗ್ರಾಂ ಚಿನ್ನ ಸಾಗಿಸುತ್ತಿರುವುದು ತಿಳಿದುಬಂದಿದೆ. ನಂತರ ಆತನನ್ನು ಬಂಧಿಸಿ, ಹೆಚ್ಚಿನ ತನಿಖೆಗೆ ಕಸ್ಟಮ್ಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಕಠ್ಮಂಡುವಿನ ಹೊರವಲಯದಲ್ಲಿರುವ ಬೌದ್ಧ ಟಿಂಚುಲಿಯಲ್ಲಿ ಸೋಮವಾರ ನೇಪಾಳದ ಕೇಂದ್ರೀಯ ತನಿಖಾ ದಳವು (ಸಿಐಬಿ) ಚೀನಾದ ಪ್ರಜೆ ಶೆರಾಬ್ ಗ್ಯಾಲ್ಮೊ ಅಲಿಯಾಸ್ ಸೋನಮ್ ಗುರುಂಗ್ ಎಂಬಾತನನ್ನು ಬಂಧಿಸಿದ್ದು, ಆತನಿಂದ  6 ಕೆಜಿ ಚಿನ್ನ ಮತ್ತು ₹48 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಆತನಿಂದ ಮೂರು ಮೊಬೈಲ್ ಫೋನ್‌ಗಳು ಮತ್ತು ನೇಪಾಳದ ಪೌರತ್ವ ದಾಖಲೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.