ಕಾಠ್ಮಂಡು: ಉತ್ತರಾಖಂಡದ ಚೀನಾ ಗಡಿಯಲ್ಲಿ ಲಿಪುಲೇಶ್ ಪಾಸ್ ಸಂಪರ್ಕಿಸುವಂತೆ ಹೊಸ ರಸ್ತೆ ನಿರ್ಮಿಸಿದ ವಿಚಾರವಾಗಿ ಭಾರತದ ರಾಯಭಾರಿಗೆ ನೇಪಾಳ ಸಮನ್ಸ್ ನೀಡಿದೆ.
ಗಡಿ ಸಮಸ್ಯೆಗೆ ಸಂಬಂಧಿಸಿ ನೇಪಾಳ ಸರ್ಕಾರದ ನಿಲುವನ್ನು ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯವಾಲಿ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವತ್ರಾ ಅವರಿಗೆ ತಿಳಿಸಿದ್ದಾರೆ. ನೇಪಾಳದ ನಿಲುವಿನ ಕುರಿತ ರಾಜತಾಂತ್ರಿಕ ಟಿಪ್ಪಣಿಯನ್ನು ಅವರಿಗೆ ಹಸ್ತಾಂತರಿಸಲಾಗಿದೆ ಎಂದು ನೇಪಾಳದ ವಿದೇಶಾಂಗ ಸಚಿವಾಲಯ ಸೋಮವಾರ ಟ್ವೀಟ್ ಮಾಡಿತ್ತು.
ಮಾನಸ ಸರೋವರಕ್ಕೆ ತೆರಳಲು ನೆರವಾಗುವ ಹಾಗೂ ಸಮುದ್ರ ಮಟ್ಟದಿಂದ 17,000 ಅಡಿ ಎತ್ತರದ ಪ್ರದೇಶದಲ್ಲಿರುವ ರಸ್ತೆಯನ್ನು ಭಾರತ ಶುಕ್ರವಾರ ಉದ್ಘಾಟಿಸಿತ್ತು. ಇದಕ್ಕೆ ನೇಪಾಳ ತಕರಾರು ವ್ಯಕ್ತಪಡಿಸಿತ್ತು. ‘ಇದು ಭಾರತದ ಗಡಿಯೊಳಗಿನ ಕಾಮಗಾರಿ. ವಿವಾದಗಳನ್ನು ಶಾಂತಿಯುತವಾಗಿ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳೋಣ’ ಎಂದು ಭಾರತವೂ ಪ್ರತ್ಯುತ್ತರ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.