ADVERTISEMENT

26 ಬಾರಿ ಮೌಂಟ್‌ ಎವರೆಸ್ಟ್ ಏರಿದ ನೇಪಾಳಿ ಶೆರ್ಪಾ

ಪಿಟಿಐ
Published 8 ಮೇ 2022, 10:21 IST
Last Updated 8 ಮೇ 2022, 10:21 IST
ಕಾಮಿ ರಿಟಾ
ಕಾಮಿ ರಿಟಾ   

ಕಠ್ಮಂಡು: ನೇಪಾಳಿ ಶೆರ್ಪಾ ಜನಾಂಗದ ಕಾಮಿ ರಿಟಾ ಎಂಬುವವರು 26 ಬಾರಿ ಮೌಂಟ್‌ ಎವರೆಸ್ಟ್‌ ಏರುವ ಮೂಲಕ ಅತಿ ಹೆಚ್ಚು ಬಾರಿ ಎವರೆಸ್ಟ್‌ ಏರಿದ ಪರ್ವತಾರೋಹಿ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

‘52 ವರ್ಷದ ಕಾಮಿ ರಿಟಾ ಹಾಗೂ ಆತನ 11 ಮಂದಿ ಶೆರ್ಪಾ ಮಾರ್ಗದರ್ಶಕರ ತಂಡದವರು ಭಾನುವಾರ 21,031.69 ಅಡಿ ಎತ್ತರವನ್ನು ಏರಿದ್ದಾರೆ. 26 ಬಾರಿ ಎವರಸ್ಟ್‌ ಏರುವ ಮೂಲಕ ರಿಟಾ ಅವರು ತಮ್ಮ ಹಿಂದಿನ ದಾಖಲೆಯನ್ನು ತಾವೇ ಮುರಿದಿದ್ದಾರೆ’ ಎಂದು ಪರ್ವತಾರೋಹಣ ಆಯೋಜಕ ಸಂಸ್ಥೆಯಾದ ಸೆವೆನ್‌ ಸಮ್ಮಿಟ್‌ ಟ್ರಕ್ಸ್‌ ಪ್ರೈ.ಲಿ.ನ ವ್ಯವಸ್ಥಾಪಕ ದಾವಾ ಶೆರ್ಪಾ ತಿಳಿಸಿದರು.

ರಿಟಾ ಅವರು1994ರ ಮೇ 13 ರಂದು ಮೊದಲ ಬಾರಿ ಮೌಂಟ್‌ ಎವರೆಸ್ಟ್‌ ಏರಿದ್ದರು. ಎವರೆಸ್ಟ್‌ ಜೊತೆಗೆ,ಮೌಂಟ್ ಗಾಡ್ವಿನ್-ಆಸ್ಟೆನ್ (ಕೆ 2), ಮೌಂಟ್ ಲೊಟ್ಸೆ, ಮೌಂಟ್ ಮನಸ್ಲು ಮತ್ತು ಮೌಂಟ್ ಚೋ ಓಯು ಅನ್ನು ಸಹ ಏರಿದ್ದಾರೆ.

ADVERTISEMENT

ಈ ವರ್ಷ ನೇಪಾಳದ ಪ್ರವಾಸೋದ್ಯಮ ಇಲಾಖೆ ಒಟ್ಟು 316 ಪರ್ವತಾರೋಹಿಗಳಿಗೆ ಎವರೆಸ್ಟ್‌ ಏರಲು ಅನುಮತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.