ADVERTISEMENT

ನೇತನ್ಯಾಹು ವಿರೋಧದ ನಡುವೆ ಇಸ್ರೇಲ್‌ ಯುದ್ಧ ಸಂಪುಟದ ಸದಸ್ಯನ ಅಮೆರಿಕ ಪ್ರವಾಸ

ಏಜೆನ್ಸೀಸ್
Published 4 ಮಾರ್ಚ್ 2024, 15:30 IST
Last Updated 4 ಮಾರ್ಚ್ 2024, 15:30 IST
<div class="paragraphs"><p>ಬೆನ್ನಿ ಗ್ಯಾಂಟ್ಸ್‌</p></div>

ಬೆನ್ನಿ ಗ್ಯಾಂಟ್ಸ್‌

   

ಚಿತ್ರ ಕೃಪೆ: ಎಕ್ಸ್‌ @gantzbe

ವಾಷಿಂಗ್ಟನ್: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರ ವಿರೋಧದ ನಡುವೆಯೂ ಅಮೆರಿಕಕ್ಕೆ ಭೇಟಿ ನೀಡಿರುವ ‘ಇಸ್ರೇಲ್‌ ಯುದ್ಧ ಸಂಪುಟ’ದ ಸದಸ್ಯ ಬೆನ್ನಿ ಗ್ಯಾಂಟ್ಸ್‌ ಅವರು ಅಲ್ಲಿಯ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಜೊತೆ ಸೋಮವಾರ ಮಾತುಕತೆ ನಡೆಸಿದರು.

ADVERTISEMENT

ಕನಿಷ್ಠ ಆರು ತಿಂಗಳ ಮಟ್ಟಿಗಾದರೂ ತಾತ್ಕಾಲಿಕ ಕದನವಿರಾಮ ಘೋಷಿಸುವಂತೆ ಮತ್ತು ಅದರಿಂದಾಗಿ ಹಮಾಸ್‌ ಒತ್ತೆಯಾಗಿ ಇಟ್ಟುಕೊಂಡಿರುವ ಇಸ್ರೇಲಿ ಪ್ರಜೆಗಳು ಬಿಡುಗಡೆಯಾಗುವಂತೆ ನೋಡಿಕೊಳ್ಳಬೇಕೆಂದು ಕಮಲಾ ಅವರು ಈ ವೇಳೆ ಗ್ಯಾಂಟ್ಸ್‌ ಅವರಿಗೆ ಸಲಹೆ ನೀಡಿದರು. ಈ ಸಲಹೆಗೆ ಗ್ಯಾಂಟ್ಸ್‌ ಒಪ್ಪಿದ್ದಾರೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಗಾಜಾದಲ್ಲಿ ತನ್ನ ದಾಳಿಯನ್ನು ತೀವ್ರಗೊಳಿಸಿರುವ ಇಸ್ರೇಲ್‌, ಈಚೆಗಷ್ಟೇ ಆಹಾರಕ್ಕಾಗಿ ಕಾಯುತ್ತಿದ್ದ ಪ್ಯಾಲೆಸ್ಟೀನಿಯರ ಹತ್ಯೆಗೈದಿತ್ತು. ಆ ಬಳಿಕ ಅಮೆರಿಕವು ವಿಮಾನಗಳ ಮೂಲಕ ಗಾಜಾದಲ್ಲಿ ಆಹಾರದ ಒದಗಿಸುತ್ತಿದೆ. ಈ ವೇಳೆಯೇ ಗ್ಯಾಂಟ್ಸ್‌ ಮತ್ತು ಕಮಲಾ ಮಾತುಕತೆ ನಡೆಸಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಮತ್ತು ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ ಜೇಕ್‌ ಸುವ್ವಿಲನ್‌ ಅವರನ್ನೂ ಗ್ಯಾಂಟ್ಸ್‌ ಭೇಟಿಯಾಗಿದ್ದರು ಎನ್ನಲಾಗಿದೆ.

ಇಸ್ರೇಲ್‌– ಹಮಾಸ್‌ ಯುದ್ಧ ಆರಂಭವಾದ ನಂತರ ವಿರೋಧ ಪಕ್ಷ ನ್ಯಾಷನಲ್‌ ಯುನಿಟಿಯು ನೇಹನ್ಯಾತು ನೇತೃತ್ವದ ಸರ್ಕಾರ ಸೇರಿತು. ಇದನ್ನು ಇಸ್ರೇಲ್‌ ಯುದ್ಧ ಸಂಪುಟ ಎಂದು ಕರೆಯಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.