ADVERTISEMENT

ನೆದರ್‌ಲೆಂಡ್ಸ್‌ನಲ್ಲಿ ಗುಂಡಿನ ದಾಳಿ; ಒಬ್ಬ ಸಾವು, ಹಲವರಿಗೆ ಗಾಯ

ಏಜೆನ್ಸೀಸ್
Published 18 ಮಾರ್ಚ್ 2019, 12:19 IST
Last Updated 18 ಮಾರ್ಚ್ 2019, 12:19 IST
   

ಹೇಗ್‌: ನೆದರ್‌ಲೆಂಡ್ಸ್‌ನಯುಟ್ರೆಕ್ಟ್ ಡಚ್‌ ನಗರದ ಟ್ರಾಮ್‌ನಲ್ಲಿ ಸೋಮವಾರ ಗುಂಡಿನ ದಾಳಿ ನಡೆದಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ.

ಟ್ರಾಮ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಹಲವು ಜನರು ಗಾಯಗೊಂಡಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ. ಘಟನೆ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ಹಲವು ಹೆಲಿಕಾಪ್ಟರ್‌ಗಳ್ನು ಸಹಾಯಕ್ಕೆ ನಿಯೋಜಿಸಲಾಗಿದೆ.

ಇಲ್ಲಿನ ರೋಡ್ ಬ್ರಿಡ್ಜ್‌ ಸಮೀಪ ಟ್ರಾಮ್‌ ನಿಂತಿದ್ದು, ಪೊಲೀಸ್‌ ವಾಹನಗಳು ಸುತ್ತುವರಿದಿವೆ. ಭಯೋತ್ಪಾದಕರು ನಡೆಸಿರುವ ದಾಳಿಯೇ ಎಂಬುದರ ಕುರಿತು ತನಿಖೆ ಕೈಗೊಳ್ಳಲಾಗಿದೆ.

ADVERTISEMENT

ಕಳೆದ ಶುಕ್ರವಾರ ನ್ಯೂಜಿಲೆಂಡ್‌ನ ಮಸೀದಿಗಳಲ್ಲಿ ಆಸ್ಟ್ರೇಲಿಯಾದ ಪ್ರಜೆ ನಡೆಸಿದ ಗುಂಡಿನ ದಾಳಿಯಲ್ಲಿ 50 ಮಂದಿ ಸಾವಿಗೀಡಾದರು. ಇದರ ಬೆನ್ನಲೇ ನೆದರ್ಲೆಂಡ್ಸ್‌ನಲ್ಲಿ ಸೋಮವಾರ ಗುಂಡಿನ ದಾಳಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.