ADVERTISEMENT

ಆಲ್‌ಝೈಮರ್‌ | ಮುಂಚಿತವಾಗಿಯೇ ಕಾಯಿಲೆ ಲಕ್ಷಣ ಪತ್ತೆಗೆ ಪಿಇಟಿ ತಂತ್ರ ಶೋಧ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 12:49 IST
Last Updated 20 ಅಕ್ಟೋಬರ್ 2022, 12:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಷಿಂಗ್ಟನ್‌: ಮರೆಗುಳಿ (ಆಲ್‌ಝೈಮರ್‌) ಕಾಯಿಲೆಯನ್ನು ಮುಂಚಿತವಾಗಿಯೇ ಪತ್ತೆ ಹಚ್ಚುವ ಪೊಸಿಟ್ರಾನ್ ಎಮಿಷನ್‌ ಟೋಮೊಗ್ರಫಿ (ಪಿಇಟಿ)ಇಮೇಜಿಂಗ್ ತಂತ್ರವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಪಿಇಟಿಯು ಆಲ್‌ಝೈಮರ್‌ ಕಾಯಿಲೆಯ ಪ್ರಾರಂಭಿಕ ಲಕ್ಷಣಗಳನ್ನು ಕಂಡುಹಿಡಿಯಲಿದೆ. ಅಲ್ಲದೇ, ಸಮಯೋಚಿತವಾಗಿ ರೋಗ ನಿರ್ಣಯಿಸಿ, ಸರಿಯಾದ ಚಿಕಿತ್ಸೆ ಪಡೆಯಲೂ ನೆರವಾಗಲಿದೆ.

ಇದರ ಸಂಶೋಧನಾ ವರದಿಯು‘ನ್ಯೂಕ್ಲಿಯರ್‌ ಮೆಡಿಸಿನ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ಈತಂತ್ರವು 18ಎಫ್-ಎಸ್‌ಎಂಬಿಟಿ -1 ಹೆಸರಿನ ರೇಡಿಯೊಟ್ರೇಸರ್ ಒಳಗೊಂಡಿರುತ್ತದೆ. ಇದುಆಲ್‌ಝೈಮರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದಾದ ವ್ಯಕ್ತಿಗಳಲ್ಲಿನ ಅತಿಭಾವುಕತೆಯ ಮೋನೊಮೈನ್ ಆಕ್ಸಿಡೇಸ್-ಬಿ (ಎಂಎಒ–ಬಿ) ಕಿಣ್ವವನ್ನು ಪತ್ತೆಹಚ್ಚುತ್ತದೆ ಎಂದು ವರದಿ ಹೇಳಿದೆ.

ಆಲ್‌ಝೈಮರ್‌ ರೋಗ ನಿರ್ಣಯ, ರೋಗದ ಹಂತ ಹಾಗೂ ರೋಗಕ್ಕೆ ಕಾರಣವಾದ ಅಂಶಗಳನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗಲಿದೆ ಎಂದು ಅಧ್ಯಯನ ವರದಿಯ ಪ್ರಮುಖ ಲೇಖಕ, ಅಮೆರಿಕದ ಪೀಟ್ಸ್‌ಬರ್ಗ್‌ ವಿಶ್ವವಿದ್ಯಾಲಯದ ವಿಕ್ಟರ್‌ ವಿಲ್ಲೆಮ್ಯಾಗ್ನೆ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.