ADVERTISEMENT

ಐಸ್‌ಲ್ಯಾಂಡ್ | ವರ್ಷದಲ್ಲಿ ಏಳನೇ ಬಾರಿ ಜ್ವಾಲಾಮುಖಿ ಸ್ಫೋಟ; ಗ್ರಾಮಸ್ಥರ ಸ್ಥಳಾಂತರ

ಏಜೆನ್ಸೀಸ್
Published 21 ನವೆಂಬರ್ 2024, 6:10 IST
Last Updated 21 ನವೆಂಬರ್ 2024, 6:10 IST
<div class="paragraphs"><p>ಐಸ್‌ಲ್ಯಾಂಡ್‌&nbsp;ರಿಕ್‌ಜೇನ್ಸ್‌ ಪ್ರಾಂತ್ಯದ ಗ್ರಿಂಡ್‌ವಿಕ್‌ ಗ್ರಾಮದಲ್ಲಿರುವ ಸುಂಧ್ನುಕಗಿಗರ್‌ ಜ್ವಾಲಾಮುಖಿ ಸ್ಫೋಟಗೊಂಡು ಹರಿದ ಲಾವಾರಸ</p></div>

ಐಸ್‌ಲ್ಯಾಂಡ್‌ ರಿಕ್‌ಜೇನ್ಸ್‌ ಪ್ರಾಂತ್ಯದ ಗ್ರಿಂಡ್‌ವಿಕ್‌ ಗ್ರಾಮದಲ್ಲಿರುವ ಸುಂಧ್ನುಕಗಿಗರ್‌ ಜ್ವಾಲಾಮುಖಿ ಸ್ಫೋಟಗೊಂಡು ಹರಿದ ಲಾವಾರಸ

   

ರಾಯಿಟರ್ಸ್ ಚಿತ್ರ

ರಿಕ್ಜಾವಿಕ್‌: ಪ್ರವಾಸಿಗರ ಮೆಚ್ಚಿನ ತಾಣವಾದ ಐಸ್‌ಲ್ಯಾಂಡ್‌ನ ದಕ್ಷಿಣ ಭಾಗದಲ್ಲಿ ಜ್ವಾಲಾಮುಖಿ ಸ್ಪೋಟಿಸಿದ್ದು, ಮೀನುಗಾರಿಕೆಯನ್ನೇ ನಂಬಿರುವ ಗ್ರಾಮದಲ್ಲಿ ಲಾವಾರಸ ಹರಿದು ನಿಂತಿದೆ. 

ADVERTISEMENT

2024ರಲ್ಲಿ ಏಳನೇ ಬಾರಿ ಇಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದ್ದು, ಗ್ರಾಮಸ್ಥರನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಿಕ್‌ಜೇನ್ಸ್‌ ಪ್ರಾಂತ್ಯದ ಗ್ರಿಂಡ್‌ವಿಕ್‌ ಗ್ರಾಮದಲ್ಲಿರುವ ಸುಂಧ್ನುಕಗಿಗರ್‌ ಜ್ವಾಲಾಮುಖಿ ಬುಧವಾರ ರಾತ್ರಿ ಸ್ಫೋಟಿಸಿದೆ. ಯಾವುದೇ ಹಾನಿಯಾಗಿಲ್ಲ ಎಂದು ಐಸ್‌ಲ್ಯಾಂಡ್‌ನ ಹವಾಮಾನ ಇಲಾಖೆ ವರದಿ ಮಾಡಿದೆ.

2021ರವರೆಗೂ ಕಳೆದ ಒಂದು ಶತಮಾನದಲ್ಲಿ ಈ ಪ್ರಾಂತ್ಯದಲ್ಲಿ ಜ್ವಾಲಾಮುಖಿ ಸ್ಫೋಟಿಸಿಲ್ಲ. 2021ರ ನಂತರದಲ್ಲಿ ಇಲ್ಲಿ ಭೂಕಂಪನ ಆರಂಭಗೊಂಡಿತು. ಬುಧವಾರ ಸಂಭವಿಸಿದ ಜ್ವಾಲಾಮುಖಿಯಿಂದಾಗಿ ಕೆಂಪು ಹಾಗೂ ಕಿತ್ತಳೆ ಬಣ್ಣದ ಲಾವಾರಸವು ದಟ್ಟ ಹೊಗೆಯೊಂದಿಗೆ ಹರಿಯುತ್ತಿರುವುದು ಕಂಡುಬಂದಿದೆ.

ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಜ್ವಾಲಾಮುಖಿಗೆ ಹೋಲಿಸಿದಲ್ಲಿ ಇದರ ಪ್ರಮಾಣ ಚಿಕ್ಕದು. ಮುನ್ನೆಚ್ಚರಿಕೆಯ ಕ್ರಮವಾಗಿ ನಾಲ್ಕು ಸಾವಿರ ನಿವಾಸಿಗಳನ್ನು ಗ್ರಾಮದಿಂದ ವರ್ಷದ ಹಿಂದೆಯೇ ಸ್ಥಳಾಂತರಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಜ್ವಾಲಾಮುಖಿಯ ನಿರಂತರ ಸ್ಫೋಟದಿಂದಾಗಿ ಇಲ್ಲಿರುವ ಬಹುತೇಕ ಮನೆಗಳ ಮಾರಾಟವಾಗಿದೆ. ಲಾವಾರಸ ಹರಿದು ಮೂರು ಮನೆಗಳು ಸುಟ್ಟಿವೆ. ಐರೋಪ್ಯ ರಾಷ್ಟ್ರಗಳಲ್ಲಿ ಐಸ್‌ಲ್ಯಾಂಡ್‌ನಲ್ಲೇ ಗರಿಷ್ಠ 33 ಸಕ್ರಿಯ ಜ್ವಾಲಾಮುಖಿಗಳಿವೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.