ADVERTISEMENT

ಸಂಸತ್ತಿನ ಮೇಲೆ ಸೈಬರ್ ದಾಳಿ ಹಿಂದೆ ಚೀನಾ ಕೈವಾಡ: ನ್ಯೂಜಿಲೆಂಡ್

ರಾಯಿಟರ್ಸ್
Published 26 ಮಾರ್ಚ್ 2024, 4:45 IST
Last Updated 26 ಮಾರ್ಚ್ 2024, 4:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ವೆಲ್ಲಿಂಗ್ಟನ್: 2021ರಲ್ಲಿ ದೇಶದ ಸಂಸತ್ತಿನ ಕಂಪ್ಯೂಟರ್ ಜಾಲದ ಮೇಲೆ ನಡೆದ ದುರುದ್ದೇಶಪೂರಿತ ಸೈಬರ್ ದಾಳಿ ಹಿಂದೆ ಚೀನಾದ ಕೈವಾಡ ಇದೆ ಎಂದು ನ್ಯೂಜಿಲೆಂಡ್ ಆರೋಪಿಸಿದೆ.

ನ್ಯೂಜಿಲೆಂಡ್ ಸಂಸದೀಯ ಸಲಹೆಗಾರರ ಕಚೇರಿಯ ಕಂಪ್ಯೂಟರ್ ಜಾಲದ ಮೇಲೆ ಚೀನಾ ಪ್ರಾಯೋಜಿತ ಸೈಬರ್ ದಾಳಿಯನ್ನು ಗುಪ್ತಚರ ದಳ ಪತ್ತೆ ಹಚ್ಚಿದೆ. ಈ ಕುರಿತು ಚೀನಾದ ಸರ್ಕಾರಕ್ಕೆ ನ್ಯೂಜಿಲೆಂಡ್ ದೂರು ಸಲ್ಲಿಸಿದೆ.

ADVERTISEMENT

ಆದರೆ ನ್ಯೂಜಿಲೆಂಡ್ ಆರೋಪವನ್ನು ಚೀನಾ ತಳ್ಳಿ ಹಾಕಿದೆ. ಅಲ್ಲದೆ ಇದು ಆಧಾರರಹಿತ ಆರೋಪ ಎಂದು ಚೀನಾದ ರಾಯಭಾರ ಕಚೇರಿ ಹೇಳಿದೆ.

ಚೀನಾ ಸರ್ಕಾರದ ಪ್ರಾಯೋಜಿತ ಹ್ಯಾಕರ್‌ಗಳು ಸೈಬರ್ ದಾಳಿ ನಡೆಸುತ್ತಿದ್ದಾರೆ ಎಂದು ಬ್ರಿಟನ್ ಹಾಗೂ ಅಮೆರಿಕ ಆರೋಪಿಸಿದೆ. ಆಸ್ಟ್ರೇಲಿಯಾ ಸಹ ಇಂತಹ ದುರುದ್ದೇಶಪೂರಿತ ಚಟುವಟಿಕೆಯನ್ನು ಖಂಡಿಸಿದೆ.

ಚೀನಾ ಪ್ರಾಯೋಜಿತ ಕೃತ್ಯವನ್ನು ಒಪ್ಪಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಈ ರೀತಿಯ ದಾಳಿಯನ್ನು ತಡೆಯಲು ಚೀನಾವನ್ನು ಒತ್ತಾಯಿಸುತ್ತಿದ್ದೇವೆ ಎಂದು ನ್ಯೂಜಿಲೆಂಡ್‌ನ ವಿದೇಶಾಂಗ ಸಚಿವ ವಿನ್‌ಸ್ಟನ್ ಪೀಟರ್ಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.