ADVERTISEMENT

ನೈಜೀರಿಯಾ ಚರ್ಚ್ ಮೇಲೆ ದಾಳಿ: ಕನಿಷ್ಠ 50 ಜನರ ಸಾವು

ರಾಯಿಟರ್ಸ್
Published 6 ಜೂನ್ 2022, 4:05 IST
Last Updated 6 ಜೂನ್ 2022, 4:05 IST
   

ನೈಜೀರಿಯಾದ ಕ್ಯಾಥೊಲಿಕ್ ಚರ್ಚ್ ಒಂದರ ಮೇಲೆ ಭಾನುವಾರ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ.

ಭಾನುವಾರದ ಸಾಮೂಹಿಕ ಪ್ರಾರ್ಥನೆಗೆ ಸೇರಿದ್ದವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಇದ್ದಾರೆ ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯರ ಹೇಳಿಕೆ ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ.

ನೈಜೀರಿಯಾದ ಓವೋ ಪಟ್ಟಣದಲ್ಲಿನ ಚರ್ಚ್‌ಗೆ ನುಗ್ಗಿದ ಬಂದೂಕುಧಾರಿಗಳು, ಗುಂಡು ಹಾರಿಸಿದ ಬಳಿಕ ಸ್ಫೋಟಕಗಳನ್ನು ಬಳಸಿ ದಾಳಿ ನಡೆಸಿದ್ದಾರೆ.

ADVERTISEMENT

ಗುಂಡಿನ ದಾಳಿಗೆ ಕಾರಣ ತಿಳಿದುಬಂದಿಲ್ಲ. ಕೃತ್ಯದ ಹೊಣೆಯನ್ನು ಕೂಡ ಯಾರೂ ಹೊತ್ತುಕೊಂಡಿಲ್ಲ. ಹೀಗಾಗಿ ಪೊಲೀಸರು ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ.

ಚರ್ಚ್‌ಗೆ ಸಮೀಪವಿರುವ ಎರಡು ಆಸ್ಪತ್ರೆಗಳಿಗೆ ಕನಿಷ್ಠ 50 ಮೃತದೇಹಗಳನ್ನು ತರಲಾಗಿದೆ ಎಂದು ವೈದ್ಯರೋರ್ವರು ತಿಳಿಸಿದ್ದಾರೆ. ಆದರೆ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅವರು ಕಳವಳ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.