ADVERTISEMENT

ನೈಜೀರಿಯಾ | ಶಾಲಾ ಕಟ್ಟಡ ಕುಸಿತ: 22 ವಿದ್ಯಾರ್ಥಿಗಳ ಸಾವು

ರಾಯಿಟರ್ಸ್
Published 13 ಜುಲೈ 2024, 5:36 IST
Last Updated 13 ಜುಲೈ 2024, 5:36 IST
<div class="paragraphs"><p>ನೈಜೀರಿಯಾದಲ್ಲಿ&nbsp; ಶಾಲಾ ಕಟ್ಟಡ ಕುಸಿತ</p></div>

ನೈಜೀರಿಯಾದಲ್ಲಿ  ಶಾಲಾ ಕಟ್ಟಡ ಕುಸಿತ

   

(ಚಿತ್ರ ಕೃಪೆ– Facebook/ NEMA Nigeria)

ಅಬುಜಾ (ನೈಜೀರಿಯಾ): ಉತ್ತರ ನೈಜೀರಿಯಾದಲ್ಲಿ ಶುಕ್ರವಾರ ಬೆಳಿಗ್ಗೆ ಭಾರಿ ದುರಂತವೊಂದು ಘಟಿಸಿದೆ. ತರಗತಿ ನಡೆಯುತ್ತಿದ್ದ ವೇಳೆ ಎರಡು ಅಂತಸ್ತಿನ ಶಾಲಾ ಕಟ್ಟಡ ಕುಸಿದು 22 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ಲ್ಯಾಟೂ ರಾಜ್ಯದ ಬುಸಾ ಬುಜಿ ಸಮುದಾಯದಲ್ಲಿರುವ ಸೇಂಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ತರಗತಿಗೆ ಹಾಜರಾದ ಕೆಲವೇ ಗಂಟೆಗಳಲ್ಲಿ ದುರ್ಘಟನೆ ಸಂಭವಿಸಿದೆ.

'ಒಟ್ಟು 154 ವಿದ್ಯಾರ್ಥಿಗಳು ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿದ್ದು, ಅವರಲ್ಲಿ 132 ಮಂದಿಯನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ 22 ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ನೈಜೀರಿಯಾದ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ (NEMA) ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ

ಕಳಪೆ ಕಾಮಗಾರಿ ಮತ್ತು ಕಟ್ಟಡ ನದಿ ದಡದ ಬಳಿಯಿರುವುದು ದುರಂತಕ್ಕೆ ಕಾರಣ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.