ಲಾಗೋಸ್(ನೈಜೀರಿಯಾ): ಉತ್ತರ ರಾಜ್ಯ ಕಡುನಾದಲ್ಲಿ ಡಕಾಯಿತರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ 14 ಮಂದಿಯನ್ನು ನೈಜೀರಿಯಾದ ಸೈನಿಕರು ರಕ್ಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಕಾಯಿತರ ಅಡಗು ತಾಣವನ್ನು ಗುರಿಯಾಗಿಸಿಕೊಂಡು ನೈಜೀರಿಯಾ ಸೇನೆ ದಾಳಿ ನಡೆಸಿದ್ದು, ಅಪಹರಣಕ್ಕೊಳಗಾದ 14 ನಾಗರಿಕರನ್ನು ರಕ್ಷಿಸಿದೆ ಎಂದು ರಾಜ್ಯ ಆಂತರಿಕ ಭದ್ರತೆ ಮತ್ತು ಗೃಹ ವ್ಯವಹಾರಗಳ ಕಮಿಷನರ್ ಸ್ಯಾಮ್ಯುಯೆಲ್ ಅರುವಾನ್ ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಒಬ್ಬ ಡಕಾಯಿತನನ್ನು ಕೊಲ್ಲಲಾಗಿದೆ. ಉಳಿದ ಡಕಾಯಿತರು ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ರಕ್ಷಿಸಲಾದ ಎಲ್ಲರನ್ನೂ ಸುರಕ್ಷಿತವಾಗಿ ಅವರ ಕುಟುಂಬಗಳಿಗೆ ಸೇರಿಸಲಾಗಿದೆ. ಈ ಪ್ರಕರಣ ಸಂಬಂಧ ಅಪಹರಣಕೀಡಾದವರಿಂದ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಅರುವಾನ್ ತಿಳಿಸಿದ್ದಾರೆ.
ನೈಜೀರಿಯಾದಲ್ಲಿ ಇತ್ತೀಚಿನಗೆ ಹಲವಾರು ಸಶಸ್ತ್ರ ದಾಳಿಗಳು ನಡೆದಿವೆ. ಇದರ ಪರಿಣಾಮವಾಗಿ ಸಾವುಗಳು ಮತ್ತು ಅಪಹರಣಗಳು ಸಂಭವಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.