ವಾಷಿಂಗ್ಟನ್: ‘ಅಮೆರಿಕದಲ್ಲಿ ಸಿಖ್ ಮೂಲಭೂತವಾದಿಯ ಕೊಲೆ ಸಂಚು ಕೃತ್ಯದ ಆರೋಪಿ, ಭಾರತೀಯ ಪ್ರಜೆ ನಿಖಿಲ್ ಗುಪ್ತಾನನ್ನು ಝೆಕ್ ಗಣರಾಜ್ಯವು ಅಮೆರಿಕಕ್ಕೆ ಹಸ್ತಾಂತರ ಮಾಡಿದೆ’ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದ ಮನವಿಯ ಮೇರೆಗೆ 52 ವರ್ಷ ವಯಸ್ಸಿನ ಗುಪ್ತಾನನ್ನು ಝೆಕ್ ಗಣರಾಜ್ಯದ ಪೊಲೀಸರು ಕಳೆದ ವರ್ಷ ಬಂಧಿಸಿದ್ದರು. ಖಾಲಿಸ್ತಾನ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂ ಅವರ ಹತ್ಯೆ ಸಂಚಿನಲ್ಲಿ ಈತ ಭಾಗಿಯಾಗಿದ್ದ ಎಂಬ ಆರೋಪಗಳಿವೆ.
ಗಡೀಪಾರು ಕ್ರಮವನ್ನು ಪ್ರಶ್ನಿಸಿ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ಝೆಕ್ ನ್ಯಾಯಾಲಯವು ಕಳೆದ ತಿಂಗಳಷ್ಟೇ ತಿರಸ್ಕರಿಸಿತ್ತು. ಭಾರತದ ಅಧಿಕಾರಿಯೊಬ್ಬರ ನಿರ್ದೇಶನದ ಅನುಸಾರ ಗುಪ್ತಾ ಕಾರ್ಯನಿರ್ವಹಿಸುತ್ತಿದ್ದರು ಎಂದು ಅಮೆರಿಕದ ವಕೀಲರು ಆರೋಪಿಸಿದ್ದರು.
ಹತ್ಯೆ ಸಂಚಿನಲ್ಲಿ ಭಾರತದ ಏಜೆಂಟ್ ಭಾಗಿದ್ದಾರೆ ಎನ್ನುವ ಆರೋಪಗಳನ್ನು ಭಾರತ ಸರ್ಕಾರವು ಬಲವಾಗಿ ತಳ್ಳಿಹಾಕಿದ್ದು, ಆರೋಪ ಕುರಿತಂತೆ ಈಗಾಗಲೇ ಉನ್ನತ ಮಟ್ಟದ ತನಿಖೆಗೂ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.