ADVERTISEMENT

ಕಳ್ಳತನ ಮಾಡಿ ಲಂಡನ್‌ಗೆ ಸಾಗಿಸಲಾಗಿದ್ದ‌ ಶಿವನ ಪುರಾತನ ವಿಗ್ರಹ ಮರಳಿ ಭಾರತಕ್ಕೆ

ಪಿಟಿಐ
Published 30 ಜುಲೈ 2020, 6:30 IST
Last Updated 30 ಜುಲೈ 2020, 6:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಂಡನ್‌: ರಾಜಸ್ಥಾನದ ದೇಗುಲವೊಂದರಿಂದ ಕಳ್ಳತನ ಮಾಡಿ, ಲಂಡನ್‌ಗೆ ಸಾಗಿಸಲಾಗಿದ್ದ ಅಪರೂಪದ ನಾಟ್ಯಭಂಗಿಯಲ್ಲಿರುವ ಶಿವನ ವಿಗ್ರಹವನ್ನು ಬ್ರಿಟನ್‌ ಅಧಿಕಾರಿಗಳು ಗುರುವಾರ ಭಾರತಕ್ಕೆ ಹಸ್ತಾಂತರಿಸಿದ್ದಾರೆ.

ನಾಲ್ಕು ಅಡಿ ಎತ್ತರದ ನಟರಾಜನ ಭಂಗಿಯಲ್ಲಿರುವ 9ನೇ ಶತಮಾನದ ಶಿವನ ವಿಗ್ರಹ 1998ರಲ್ಲಿ ರಾಜಸ್ಥಾನದ ಬರೋಲಿ ಜಿಲ್ಲೆಯ ಘಟೇಶ್ವರ ದೇವಾಲಯದಿಂದ ಕಳುವಾಗಿತ್ತು. 2003ರಲ್ಲಿ ಈ ವಿಗ್ರಹ ಲಂಡನ್‌ನಲ್ಲಿರುವುದಾಗಿ ತಿಳಿದುಬಂತು. ನಂತರ ಬ್ರಿಟನ್‌ ಅಧಿಕಾರಿಗಳು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಶಿವನ ವಿಗ್ರಹ ಪತ್ತೆಯಾಗಿ, 2005ರಲ್ಲಿ ಲಂಡನ್‌ಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ತಲುಪಿತು.

ಭಾರತೀಯ ಪುರಾತತ್ವ ಇಲಾಖೆಯ ತಜ್ಞರುಆಗಸ್ಟ್‌ 2017ರಲ್ಲಿ ಲಂಡನ್‌ನಲ್ಲಿರುವ ಭಾರತೀಯ ಕಚೇರಿಗೆ ಭೇಟಿ ನೀಡಿ, ಅಲ್ಲಿದ್ದ ಶಿವನ ವಿಗ್ರಹವನ್ನು ಪರಿಶೀಲಿಸಿ, ‘ಇದು ಘಟೇಶ್ವರ ದೇವಾಲಯದಿಂದ ಕಳುವಾದ ಶಿವನ ವಿಗ್ರಹವೇ’ ಎಂದು ಖಚಿತಪಡಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.