ಲಂಡನ್: ಅಕ್ರಮವಾಗಿ ‘ಸಾಲಮರುಪಾವತಿ ಖಾತರಿ ಪತ್ರಗಳ (ಎಲ್‌ಒಯು)’ ನೆರವಿನಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ₹13,000 ಕೋಟಿ ಸಾಲ ಪಡೆದು ಮರುಪಾವತಿ ಮಾಡದೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಅವರ ಜಾಮೀನು ಅರ್ಜಿಯನ್ನು ಬ್ರಿಟನ್‌ನ ದಿ ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್ ತಿರಸ್ಕರಿಸಿದೆ.
ಇದನ್ನೂ ಓದಿ:ನೀರವ್, ಮಲ್ಯಗೆ ಒಂದೇ ಬ್ಯಾರಕ್
ಈ ಹಿಂದೆ ವೆಸ್ಟ್‌ಮಿನಿಸ್ಟರ್ ಮೆಜಿಸ್ಟ್ರೇಟ್ಸ್ ಕೋರ್ಟ್ ಮೂರು ಬಾರಿ ಜಾಮೀನು ಅರ್ಜಿಯನ್ನು ತಳ್ಳಿಹಾಕಿತ್ತು.ನೀರವ್ ಮೋದಿಯವರ ಜಾಮೀನು ಅರ್ಜಿ ತಳ್ಳಿ ಹಾಕಿದ್ದು ಇದು ನಾಲ್ಕನೇ ಬಾರಿ.
ವಂಚನೆ ಹಾಗೂ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ನೀರವ್ ಮೋದಿಯನ್ನು ಬಂಧಿಸಿದ್ದರು.
ಮಂಗಳವಾರ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ನ್ಯಾಯವಾದಿ ಕ್ಲೇರ್ ಮೊಂಟ್‌ಗೊಮೆರಿನೀರವ್ ಪರ ಜಾಮೀನು ಅರ್ಜಿ ಸಲ್ಲಿಸಿದ್ದರು.ನೀರವ್‌ಗೆ ಜಾಮೀನು ನೀಡಿದರೆ ಅವರಿಗೆ ಇಲೆಕ್ಟ್ರಾನಿಕ್ ಸಾಧನವೊಂದನ್ನುತಗುಲಿಸಿ, ಅವರ ಚಲನವಲನಗಳನ್ನು ದಾಖಲಿಸಿ, ಇದಕ್ಕೆ ತನ್ನ ಕಕ್ಷಿದಾರ ತಯಾರಾಗಿದ್ದಾರೆ ಎಂದಿದ್ದಾರೆಕ್ಲೇರ್.
ಬಂಡವಾಳವನ್ನು ವರ್ಧಿಸಲು ಅವರು ಇಲ್ಲಿಗೆ ಬಂದಿದ್ದರು.ಜಗತ್ತಿನ ಯಾವ ಮೂಲೆಯಲ್ಲಿ ಅದು ಸಾಧ್ಯ ಎಂಬುದನ್ನು ತಿಳಿಯಲು ಅವರು ಬಂದಿದ್ದು.ಅವರಿಗೆ ಜಾಮೀನು ನೀಡಿದರೆ ಅವರಿಗೊಂದು ವಿದ್ಯುನ್ಮಾನ ಸಾಧನವನ್ನು ಕಟ್ಟುಹಾಕಿಅವರ ಫೋನ್ ಸಂಭಾಷಣೆಗಳನ್ನೂ ಜಾಡು ಹಿಡಿಯಬಹುದು.
ನೀರವ್ ಅವರ ಹಸ್ತಾಂತರ ಪ್ರಕ್ರಿಯೆಯೂ ಶುರುವಾಗಿರುವುದರಿಂದ ಅವರು ಓಡಿ ಹೋಗುವ ಸಾಧ್ಯತೆ ಇಲ್ಲ. ಅವರ ಮಗ ಮತ್ತು ಮಗಳು ಇಲ್ಲಿಗೇ ಬರಲಿದ್ದಾರೆ.ಅವರು ವಿಶ್ವವಿದ್ಯಾಲಯವೊಂದನ್ನು ಆರಂಭಿಸಲಿದ್ದಾರೆ ಎಂದಿದ್ದಾರೆ ಕ್ಲೇರ್.
ನೀರವ್ ಮೋದಿಯನ್ನು ವಿಕಿಲೀಕ್ಸ್‌ನ ಜೂಲಿಯನ್ ಅಸ್ಸಾಂಜ್‌ಗೆ ಹೋಲಿಸುತ್ತಿರುವುದರ ಬಗ್ಗೆ ಮಾತನಾಡಿದ ಕ್ಲೇರ್, ಅಸ್ಸಾಂಜ್‌ನಂತೆ ಮೋದಿ ಯಾವುದಾದರೂ ರಾಯಭಾರಿ ಕಚೇರಿಯಲ್ಲಿ ಅಭಯ ಪಡೆದಿರಲಿಲ್ಲ.ಅವರೊಬ್ಬ ಸಾಮಾನ್ಯ ವ್ಯಕ್ತಿ, ಅವರು ಪಲಾಯನ ಮಾಡಲಾರರು ಎಂದು ವಾದಿಸಿದ್ದಾರೆ.
ಇದನ್ನೂ ಓದಿ:ನೀರವ್ ಮೋದಿ ಹಸ್ತಾಂತರ ಲಂಡನ್‌ಗೆ ಅಧಿಕಾರಿಗಳು
ತನ್ನ ಮೇಲೆ ಪ್ರಕರಣದ ಆರೋಪ ಹೊರಿಸುವ ಮುನ್ನವೇ ಅಂದರೆ 2018 ಜನವರಿಯಲ್ಲಿಯೇ ತಾನು ಲಂಡನ್‌ಗೆ ಬಂದಿದ್ದೆ ಎಂದಿದ್ದಾರೆ ನೀರವ್ ಮೋದಿ. ನೀರವ್ಮೋದಿಯನ್ನು ಹಸ್ತಾಂತರಿಸಬೇಕು ಎಂಬ ಭಾರತದ ಮನವಿಗೆ ಪ್ರತಿಕ್ರಿಯಿಸಿದ ಅವರು, ನಾನು ಕಾನೂನು ರೀತಿಯಲ್ಲಿಯೇ ಬ್ರಿಟನ್‌ನಲ್ಲಿ ನೆಲೆಸಿದ್ದೇನೆ.ನನಗೆ ಇಲ್ಲಿ ಕೆಲಸವಿದೆ.ನಾನು ತೆರಿಗೆ ಪಾವತಿ ಮಾಡುತ್ತಿದ್ದೇನೆ ಎಂದಿದ್ದಾರೆ.
ರಾಯಲ್ ಕೋರ್ಟ್ಸ್ ಆಫ್ ಜಸ್ಟೀಸ್ ವಿಚಾರಣೆ ವೇಳೆ ನ್ಯಾಯಮೂರ್ತಿ ಇಂಗ್ರಿಜ್ ಸಿಮ್ಲೆರ್ ಅವರು, ನೀರವ್ ಮೋದಿ ಅವರು ಸಾಕ್ಷ್ಯವನ್ನು ನಾಶ ಮಾಡಿದ್ದಾರೆ. ಸಾಕ್ಷ್ಯ ದಾಖಲೆಗಳನ್ನು ನಾಶ ಮಾಡಿರುವುದಕ್ಕೆ ದಾಖಲೆಗಳಿವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.