ADVERTISEMENT

ಅವ್ಯವಹಾರ: ‘ನಿಸಾನ್’ ಮುಖ್ಯಸ್ಥನ ಬಂಧನ

ಏಜೆನ್ಸೀಸ್
Published 20 ನವೆಂಬರ್ 2018, 8:27 IST
Last Updated 20 ನವೆಂಬರ್ 2018, 8:27 IST
ಕಾರ್ಲಸ್‌ ಘೋಸ್ನ್
ಕಾರ್ಲಸ್‌ ಘೋಸ್ನ್   

ಟೋಕಿಯೊ : ಕಾರು ತಯಾರಿಕಾ ಸಂಸ್ಥೆ ನಿಸಾನ್, ತನ್ನ ಮುಖ್ಯಸ್ಥ ಕಾರ್ಲಸ್ ಘೋಸ್ನ್ ಹಣ ದುರ್ಬಳಕೆ ಮಾಡಿಕೊಂಡಿದ್ದು, ಗಂಭೀರವಾದ ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದೆ. ಇದರ ನಡುವೆಯೇ, ಅವರು ಬಂಧನಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.

‘ಘೋಸ್ನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸೇವೆಯಿಂದ ಅವರನ್ನುಅಮಾನತುಗೊಳಿಸುವಂತೆ ಪ್ರಸ್ತಾವ ಇರಿಸಲಾಗುವುದು’ ಎಂದು ಸಂಸ್ಥೆ ತಿಳಿಸಿದೆ. ಆದಾಯ ಕುರಿತ ಮಾಹಿತಿಯನ್ನು ಮರೆಮಾಚಿದ್ದು ಸೇರಿದಂತೆ ಘೋಸ್ನ್ ತಪ್ಪೆಸಗುತ್ತಾ ಬಂದಿದ್ದಾರೆ ಎನ್ನಲಾಗಿದ್ದು, ಈ ಕುರಿತು ಸ್ವತಃ ತನಿಖೆ ನಡೆಸಲಾಗುವುದು ಎಂದು ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT