ಕಠ್ಮಂಡು: ‘ತಮ್ಮ ನೆಲದಲ್ಲಿ ಚೀನಾ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಭಾನುವಾರ ಹೇಳಿದ್ದಾರೆ. ಈ ಮೂಲಕ ‘ಒಂದು ಚೀನಾ’ ನೀತಿಗೆ ತಮ್ಮ ರಾಷ್ಟ್ರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಚೀನಾ ಕಮ್ಯುನಿಸ್ಟ್ ಪಾರ್ಟಿಯ ಕೇಂದ್ರ ಸಮಿತಿಯ ಸದಸ್ಯ ಚೆನ್ ಜಿನಿಂಗ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ನಡೆದ ಸಭೆಯಲ್ಲಿ ಒಲಿ ಈ ಹೇಳಿಕೆ ನೀಡಿದ್ದಾರೆ. ಕಠ್ಮಂಡುವಿನ ಬಾಲುವಾಟರ್‌ನಲ್ಲಿರುವ ಪ್ರಧಾನಿ ಅವರ ಅಧಿಕೃತ ನಿವಾಸದಲ್ಲಿ ಸಭೆ ನಡೆದಿದೆ.
ನೇಪಾಳದ ಭೂಪ್ರದೇಶದಲ್ಲಿ ಚೀನಾ ವಿರೋಧಿ ಚಟುವಟಿಕೆಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಒಲಿ ಅವರು ಚೀನಾದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಚೀನಾವು ತೈವಾನ್‌ಅನ್ನು ತನ್ನ ಭಾಗ ಎಂದು ಹೇಳಿಕೊಳ್ಳುತ್ತಾ ಬಂದಿದೆ. ಮಾತ್ರವಲ್ಲ, ತನ್ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಎಲ್ಲ ದೇಶಗಳು ‘ಒಂದು ಚೀನಾ’ ನೀತಿಯನ್ನು ಅನುಸರಿಸುವುದನ್ನು ಕಡ್ಡಾಯಗೊಳಿಸಿದೆ. ತೈವಾನ್ ಚೀನಾದ ಭಾಗ ಎಂದು ‘ಒಂದು ಚೀನಾ’ ನೀತಿ ಹೇಳುತ್ತದೆ
ನೇಪಾಳದ ಆರ್ಥಿಕ ಅಭಿವೃದ್ಧಿಗೆ ಚೀನಾದಿಂದ ನಿರಂತರ ಬೆಂಬಲ ಲಭಿಸಲಿದೆ ಎಂಬ ಭರವಸೆಯನ್ನು ಒಲಿ ಅವರು ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.