ಕೋ ಸೆಮೈನ್: ‘ಥಾಯ್ ಹಾಲಿಡೇ ಐಲ್ಯಾಂಡ್ ಬಂಗಲೆಯಲ್ಲಿ ಸಂಭವಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಅವರ ಸಾವಿನಲ್ಲಿ ಯಾವುದೇ ಶಂಕೆಗಳಿಲ್ಲ. ಹಿಂಸಾಕೃತ್ಯದಿಂದ ಸಾವು ಸಂಭವಿಸಿಲ್ಲ’ ಎಂದು ಸ್ಥಳೀಯ ಪೊಲೀಸರು ಶನಿವಾರ ಸ್ಪಷ್ಟಪಡಿಸಿದ್ದಾರೆ.
‘ಘಟನಾ ಸ್ಥಳದಲ್ಲಿ ಯಾವುದೇ ಹಿಂಸಾಕೃತ್ಯ ಸಂಭವಿಸಿಲ್ಲ ಎಂಬುದು ನಮ್ಮ ತನಿಖೆಯಿಂದ ಗೊತ್ತಾಗಿದೆ’ ಎಂದು ಥಾಯ್ಲೆಂಡ್ ಪೊಲೀಸ್ ಅಧಿಕಾರಿಗಳು ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.
ಶುಕ್ರವಾರ ಕೋ ಸೆಮೈನ್ ದ್ವೀಪದಲ್ಲಿರುವ ಸಮುಜನಾ ಬಂಗಲೆಯಲ್ಲಿ 52 ವರ್ಷ ವಯಸ್ಸಿನ ಶೇನ್ ವಾರ್ನ್ ನಿಶ್ತೇಜರಾಗಿ ಪತ್ತೆಯಾಗಿದ್ದರು. ಅವರು ನಿಧನ ಹೊಂದಿರುವುದು ನಂತರ ಗೊತ್ತಾಗಿತ್ತು.
‘ಆಸ್ಟ್ರೇಲಿಯಾದ ನಿವೃತ್ತ ಲೆಗ್‌ಸ್ಪಿನ್ನರ್ ಶೇನ್ ಕೀತ್ ವಾರ್ನ್ ಥಾಯ್ಲೆಂಡ್‌ನ ಕೋ ಸೆಮೈನಲ್ಲಿ ನಿಧನರಾದರು. ಅವರಿಗೆ ಹೃದಯಾಘಾತವಾಗಿದೆಯೆನ್ನಲಾಗಿದೆ. ತಮ್ಮ ವಿಲ್ಲಾ (ಬಂಗಲೆ)ದಲ್ಲಿ ಅವರಿದ್ದರು. ಶುಕ್ರವಾರ ಸಂಜೆ ಅವರು ನಿಸ್ತೇಜರಾದಾಗ, ವೈದ್ಯಕೀಯ ತಂಡವು ನೀಡಿದ ಚಿಕಿತ್ಸೆಗಳು ಫಲಕಾರಿಯಾಗಲಿಲ್ಲ‘ ಎಂದು ವಾರ್ನ್ ಅವರ ಮ್ಯಾನೇಜ್‌ಮೆಂಟ್ ತಂಡವು ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.