ADVERTISEMENT

Nobel Prize| ಸ್ವೀಡನ್‌ ವಿಜ್ಞಾನಿ ಸ್ವಾಂಟ್‌ ಪಾಬೊಗೆ ನೊಬೆಲ್‌ ಪ್ರಶಸ್ತಿ

ಏಜೆನ್ಸೀಸ್
Published 3 ಅಕ್ಟೋಬರ್ 2022, 13:32 IST
Last Updated 3 ಅಕ್ಟೋಬರ್ 2022, 13:32 IST
ಸ್ವಾಂಟಿ ಪಾಬೊ
ಸ್ವಾಂಟಿ ಪಾಬೊ   

ಸ್ಟಾಕ್‌ಹೋಮ್‌ (ಎಪಿ): ಶರೀರ ವಿಜ್ಞಾನ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗಾಗಿ ಸ್ವೀಡನ್‌ನ ವಿಜ್ಞಾನಿ ಸ್ವಾಂಟಿ ಪಾಬೊ (67) ಅವರಿಗೆ ನೊಬೆಲ್‌ ಪುರಸ್ಕಾರ ಒಲಿದಿದೆ.

‘ಮಾನವ ವಿಕಸನದ ಕುರಿತು ಪಾಬೊ ನಡೆಸಿರುವ ಸಂಶೋಧನೆಯು ಮನುಷ್ಯನ ದೇಹದೊಳಗಿನ ಪ್ರತಿಕಾಯ ವ್ಯವಸ್ಥೆಯ ಕುರಿತು ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ’ ಎಂದು ಪ್ರಶಸ್ತಿ ಆಯ್ಕೆ ಸಮಿತಿಯು ಸೋಮವಾರ ಹೇಳಿದೆ.

‘ನಿಯಾಂಡರ್ತಲಸ್‌ಗಳಿಂದ ಹೋಮೋ ಸೇಫಿಯನ್ಸ್‌ಗಳಿಗೆ ವಂಶವಾಹಿಗಳ ಹರಿವು ಸಂಭವಿಸಿದೆ ಎಂಬುದನ್ನು ಪಾಬೊ ಹಾಗೂ ಅವರ ತಂಡ ಪತ್ತೆಹಚ್ಚಿದೆ. ಸಹಬಾಳ್ವೆಯ ಕಾಲಘಟ್ಟದಲ್ಲಿ ಇವರು ಒಟ್ಟಿಗೆ ಮಕ್ಕಳನ್ನು ಹೊಂದಿದ್ದರು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ’ ಎಂದು ನೊಬೆಲ್‌ ಸಮಿತಿ ಮುಖ್ಯಸ್ಥ ಆನಾ ವೆಡೆಲ್‌ ಹೇಳಿದ್ದಾರೆ.

ADVERTISEMENT

ಪಾಬೊ ಅವರ ತಂದೆ ಸೂನ್‌ ಬರ್ಗ್‌ಸ್ಟ್ರಾಮ್‌ ಕೂಡ ವೈದ್ಯಕೀಯ ವಿಭಾಗದಲ್ಲಿ ನೊಬೆಲ್‌ ಪ್ರಶಸ್ತಿ ಪಡೆದಿದ್ದರು. 1982ರಲ್ಲಿ ಅವರಿಗೆ ಈ ಪುರಸ್ಕಾರ ಒಲಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.