ಟೋಕಿಯೊ: ಮಿಲಿಟರಿ ಬಲ ಪ್ರದರ್ಶನಕ್ಕೆ ಮುಂದಾಗಿರುವ ಉತ್ತರ ಕೊರಿಯಾ, ಜಪಾನ್ ಕಡೆಗೆ ಖಂಡಾಂತರ ಕ್ಷಿಪಣಿ ಉಡಾಯಿಸಿದೆ. ಇದು ಕೊರಿಯಾ ಪೆನಿನ್ಸುಲಾ ಹಾಗೂ ಜಪಾನ್ ನಡುವಣ ಸಾಗರದಲ್ಲಿ ಪತನಗೊಂಡಿದೆ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಸುರಕ್ಷಿತ ತಾಣಗಳಲ್ಲಿ ಆಶ್ರಯ ಪಡೆಯುವಂತೆ ತನ್ನ ನಾಗರಿಕರಿಗೆ ಜಪಾನ್ ಎಚ್ಚರಿಕೆ ನೀಡಿದೆ.
ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್‌ಯಾಂಗ್ ಸಮೀಪದಿಂದ ಕ್ಷಿಪಣಿ ಉಡಾಯಿಸಲಾಗಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.
ಏತನ್ಮದ್ಯೆ ಉತ್ತರ ಕೊರಿಯಾ ಉಡಾವಣೆ ಮಾಡಿದ ಖಂಡಾಂತರ ಕ್ಷಿಪಣಿ ತನ್ನ ಪ್ರದೇಶದಲ್ಲಿ ಬಿದ್ದಿಲ್ಲ ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ತಿಳಿಸಿದ್ದಾರೆ.
ಬಳಿಕ ಹೊಕ್ಕೈಡೊ ಪ್ರದೇಶದ ನಾಗರಿಕರಿಗೆ ನೀಡಿದ್ದ ಸೂಚನೆಯನ್ನು ಹಿಂಪಡೆಯಲಾಯಿತು.
ಈ ವರ್ಷ ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಜಂಟಿ ಮಿಲಿಟರಿ ಸಮರಾಭ್ಯಾಸಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ 30 ಕ್ಷಿಪಣಿಗಳನ್ನು ಉಡಾಯಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.