ಸೋಲ್: ಪೂರ್ವ ಸಮುದ್ರದ ಕಡೆಗೆ ಉತ್ತರ ಕೊರಿಯಾವು ಮಂಗಳವಾರ ಸೀಮಿತ ವ್ಯಾಪ್ತಿಯ ಗುರಿ ನಿರ್ದೇಶಿತ ಕ್ಷಿಪಣಿಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತದಾನ ಆರಂಭವಾಗುವ ಕೆಲವೇ ಗಂಟೆಗಳ ಮುನ್ನ, ತನ್ನ ಶಸ್ತ್ರಾಸ್ತ್ರ ಪ್ರದರ್ಶನವನ್ನು ಉತ್ತರ ಕೊರಿಯಾವು ಮುಂದುವರಿಸಿದೆ ಎಂದು ಹೇಳಿದೆ.
ಹಾರಿಸಿದ ಕ್ಷಿಪಣಿಗಳ ಸಂಖ್ಯೆ ಎಷ್ಟು? ಅವು ಎಷ್ಟು ದೂರ ಹಾರಿದವು ಎಂಬುದನ್ನು ದಕ್ಷಿಣ ಕೊರಿಯಾ ಖಚಿತಪಡಿಸಿಲ್ಲ.
ಕ್ಷಿಪಣಿಗಳು ಸಮುದ್ರಕ್ಕೆ ಬಿದ್ದಿವೆ ಎಂದು ಹೇಳಲಾಗಿದ್ದು, ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ ಎಂದು ಜಪಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.