ಸೋಲ್: ಅಮೆರಿಕದಲ್ಲಿ ಐತಿಹಾಸಿಕ ಚುನಾವಣೆ ನಡೆಯುವುದಕ್ಕೂ ಕೆಲವೇ ಗಂಟೆಗಳಿಗೂ ಮುನ್ನ ಬಹು ಕಡಿಮೆ ಶ್ರೇಣಿಯ ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾ ಶಕ್ತಿ ಪ್ರದರ್ಶನ ನಡೆಸಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇಂದು (ನ.5) ಮತದಾನ ನಡೆಯಲಿದೆ. ಅಮೆರಿಕದಲ್ಲಿ ಮತದಾನ ಆರಂಭಕ್ಕೂ ಕೆಲವೇ ಗಂಟೆಗಳೂ ಮುನ್ನ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿರುವುದಾಗಿ ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ.
ಕೊರಿಯಾ ಪೆನಿನ್ಸುಲಾದ ಪೂರ್ವ ಸಾಗರದಲ್ಲಿ ಕ್ಷಿಪಣಿಗಳು ಪತನಗೊಂಡಿವೆ ಎಂದು ತಿಳಿಸಿದೆ.
ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆ ನಡೆಸಿರುವುದನ್ನು ಜಪಾನ್ ಸಹ ಖಚಿತಪಡಿಸಿಕೊಂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ ಎಂದು ತಿಳಿಸಿದೆ.
ರಷ್ಯಾಕ್ಕೆ ಸೇನೆ ರವಾನಿಸಿದ ಬೆನ್ನಲ್ಲೇ ಉತ್ತರ ಕೊರಿಯಾ, ಅಮೆರಿಕವನ್ನು ತಲುಪುವಷ್ಟು ಸಮರ್ಥವಾಗಿರುವ ಐಸಿಬಿಎಂ ಖಂಡಾಂತರ ಕ್ಷಿಪಣಿಯ ಪರೀಕ್ಷೆ ನಡೆಸಿತ್ತು.
ಇದಕ್ಕೆ ಪ್ರತಿಯಾಗಿ ಭಾನುವಾರದಂದು ದಕ್ಷಿಣ ಕೊರಿಯಾ, ಜಪಾನ್ ಮತ್ತು ಅಮೆರಿಕ ಭಾರಿ ಬಾಂಬರ್ ಒಳಗೊಂಡಂತೆ ಜಂಟಿ ಸಮರಾಭ್ಯಾಸವನ್ನು ನಡೆಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.