ADVERTISEMENT

Russia Ukraine War|ರಷ್ಯಾ ಪರ 12 ಸಾವಿರ ಸೈನಿಕರನ್ನು ಕಳುಹಿಸಿದ ಉತ್ತರ ಕೊರಿಯಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2024, 9:19 IST
Last Updated 18 ಅಕ್ಟೋಬರ್ 2024, 9:19 IST
<div class="paragraphs"><p>ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ&nbsp;ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್ ಉನ್‌  </p></div>

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್ ಉನ್‌

   

ಸೋಲ್: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಬೆಂಬಲಿಸಲು ಉತ್ತರ ಕೊರಿಯಾ 12,000 ಸೈನಿಕರನ್ನು ನಿಯೋಜಿಸಲು ನಿರ್ಧರಿಸಿದೆ ಎಂದು ದಕ್ಷಿಣ ಕೊರಿಯಾದ ಬೇಹುಗಾರಿಕಾ ಸಂಸ್ಥೆ ಶುಕ್ರವಾರ ಹೇಳಿಕೊಂಡಿದೆ.

ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೊಲ್ ಅವರು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರ ಉತ್ತರ ಕೊರಿಯಾದ ಪಡೆಗಳ ಪಾಲ್ಗೊಳ್ಳುವಿಕೆ ಕುರಿತಂತೆ ಚರ್ಚಿಸಲು ಪ್ರಮುಖ ಗುಪ್ತಚರ, ಮಿಲಿಟರಿ ಮತ್ತು ರಾಷ್ಟ್ರೀಯ ಭದ್ರತಾ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

‘ಪ್ರಸ್ತುತ ಪರಿಸ್ಥಿತಿಯಲ್ಲಿ ರಷ್ಯಾ ಮತ್ತು ಉತ್ತರ ಕೊರಿಯಾದ ನಿಕಟ ಸಂಬಂಧಗಳ ಹೊರತಾಗಿಯೂ ರಕ್ಷಣಾ ಕ್ಷೇತ್ರದ ನಿಯಮಗಳನ್ನು ಮೀರಿ ಸೈನಿಕರನ್ನು ಕಳುಹಿಸಲು ಮುಂದಾಗಿರುವುದು ನಮ್ಮ ದೇಶಕ್ಕೆ (ದಕ್ಷಿಣ ಕೊರಿಯಾ) ಮಾತ್ರವಲ್ಲದೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಗಂಭೀರವಾದ ಭದ್ರತಾ ಬೆದರಿಕೆಯಾಗಿದೆ’ ಎಂದು ಯೂನ್ ಸುಕ್ ಯೊಲ್ ಕಳವಳ ವ್ಯಕ್ತಪಡಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.