ADVERTISEMENT

ದಾಳಿಗೆ ಪ್ರಚೋದಿಸಿದರೆ ದಕ್ಷಿಣ ಕೊರಿಯಾ ಸರ್ವನಾಶ: ಕಿಮ್‌ ಎಚ್ಚರಿಕೆ

ಏಜೆನ್ಸೀಸ್
Published 4 ಅಕ್ಟೋಬರ್ 2024, 2:31 IST
Last Updated 4 ಅಕ್ಟೋಬರ್ 2024, 2:31 IST
<div class="paragraphs"><p> ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಸೇನೆಯ ವಿಶೇಷ ಕಾರ್ಯಾಚರಣೆಯ ಸಶಸ್ತ್ರ ಪಡೆಯ ತರಬೇತಿ ನೆಲೆಗೆ ಭೇಟಿ ನೀಡಿದ್ದರು</p></div>

ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಸೇನೆಯ ವಿಶೇಷ ಕಾರ್ಯಾಚರಣೆಯ ಸಶಸ್ತ್ರ ಪಡೆಯ ತರಬೇತಿ ನೆಲೆಗೆ ಭೇಟಿ ನೀಡಿದ್ದರು

   

ರಾಯಿಟರ್ಸ್‌ ಚಿತ್ರ

ಸಿಯೋಲ್‌: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ಅಣ್ವಸ್ತ್ರಗಳನ್ನು ಬಳಸಲು ಪ್ರಯತ್ನಿಸಿದರೆ ಅವರ ಸರ್ಕಾರ ಅಂತ್ಯವಾಗಲಿದೆ ಎಂದು ದಕ್ಷಿಣ ಕೊರಿಯಾದ ನಾಯಕ ಹೇಳಿಕೆ ನೀಡಿದ ಬೆನ್ನಲ್ಲೇ, ‘ದಾಳಿಗೆ ಪ್ರಚೋದಿಸಿದರೆ ಪರಮಾಣು ದಾಳಿ ಮೂಲಕ ದಕ್ಷಿಣ ಕೊರಿಯಾವನ್ನು ಸರ್ವನಾಶ ಮಾಡಬೇಕಾಗುತ್ತದೆ’ ಎಂದು ಕಿಮ್‌ ಗುಡುಗಿದ್ದಾರೆ. 

ADVERTISEMENT

ಉತ್ತರ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಇಂತಹ ವಾಗ್ವಾದ ಹೊಸದೇನಲ್ಲ. ಆದರೆ ಈ ಹೇಳಿಕೆಗಳು ಉತ್ತರ ಕೊರಿಯಾದಲ್ಲಿ ಪರಮಾಣು ಅಣ್ವಸ್ತ್ರ ಇರುವ ಬಗ್ಗೆ ಮತ್ತು ದಕ್ಷಿಣ ಕೊರಿಯಾ ಮೇಲಿನ ದ್ವೇಷದ ಬಗ್ಗೆ ಬಹಿರಂಗಪಡಿಸಿವೆ.

ಎರಡು ದಿನಗಳ ಹಿಂದೆ ವಿಶೇಷ ಕಾರ್ಯಾಚರಣೆ ಘಟಕಕ್ಕೆ ಭೇಟಿ ನೀಡಿದ್ದ ಕಿಮ್, ಉತ್ತರ ಕೊರಿಯಾದ ಸಾರ್ವಭೌಮತ್ವವನ್ನು ಅತಿಕ್ರಮಿಸಲು ದಕ್ಷಿಣ ಕೊರಿಯಾ ಸಶಸ್ತ್ರ ಪಡೆಗಳನ್ನು ಬಳಸಿದರೆ, ಅಣ್ವಸ್ತ್ರ ಸೇರಿದಂತೆ ತನ್ನಲ್ಲಿರುವ ಎಲ್ಲಾ ಆಕ್ರಮಣಕಾರಿ ಅಸ್ತ್ರಗಳನ್ನು ಹಿಂಜರಿಕೆಯಿಲ್ಲದೆ ಬಳಸುವಂತೆ ಸೂಚನೆ ನೀಡಿದ್ದಾರೆ ಎಂದು ಉತ್ತರ ಕೊರಿಯಾದ ಅಧಿಕೃತ ಸುದ್ದಿ ಕೇಂದ್ರ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.