ADVERTISEMENT

ಪ್ರಚೋದಿಸಿದರೆ ಅಣ್ವಸ್ತ್ರ ಬಳಸಿ ದ. ಕೊರಿಯಾ ಧ್ವಂಸ: ಕಿಮ್ ಎಚ್ಚರಿಕೆ

ಏಜೆನ್ಸೀಸ್
Published 4 ಅಕ್ಟೋಬರ್ 2024, 16:01 IST
Last Updated 4 ಅಕ್ಟೋಬರ್ 2024, 16:01 IST
ಕಿಮ್ ಜೊಂಗ್ ಉನ್
ಕಿಮ್ ಜೊಂಗ್ ಉನ್   

ಸೋಲ್‌: ‘ಪ್ರಚೋದಿಸಿದರೆ ಅಣ್ವಸ್ತ್ರಗಳನ್ನು ಬಳಸಿ ಶಾಶ್ವತವಾಗಿ ದಕ್ಷಿಣ ಕೊರಿಯಾವನ್ನು ಧ್ವಂಸಗೊಳಿಸಲಾಗುವುದು’ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಎಚ್ಚರಿಸಿದ್ದಾರೆ ಎಂದು ಸರ್ಕಾರದ ಮಾಧ್ಯಮ ವರದಿ ಮಾಡಿದೆ.

ಉಭಯ ದೇಶಗಳ ನಡುವೆ ಆಕ್ರೋಶದ ಮಾತುಗಳು ಹೊಸದಲ್ಲ. ಆದರೆ, ಉಭಯ ದೇಶಗಳು ಇತ್ತೀಚೆಗೆ ನಿರಂತರವಾಗಿ ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವುದು ಹಾಗೂ ಅಣ್ವಸ್ತ್ರ ಬಳಕೆ ಎಚ್ಚರಿಕೆಯಿಂದಾಗಿ ಈ ಬೆಳವಣಿಗೆಯು ಗಮನಸೆಳೆದಿದೆ.

ವಿಶೇಷ ಪಡೆಗಳ ಕಾರ್ಯಕ್ಷೇತ್ರಕ್ಕೆ ಬುಧವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಿಮ್‌, ‘ಅಗತ್ಯ ಎನಿಸಿದರೆ ಅಣ್ವಸ್ತ್ರ ಸೇರಿದಂತೆ ತನ್ನ ಸುಪರ್ದಿಯಲ್ಲಿರುವ ಶಸ್ತ್ರಾಸ್ತ್ರಗಳನ್ನು ಹಿಂಜರಿಕೆಯಿಲ್ಲದೇ ಬಳಸಲಾಗುವುದು’ ಎಂದು ಎಚ್ಚರಿಸಿದ್ದರು.

ADVERTISEMENT

‘ತನ್ನ ಭೂಪ್ರದೇಶವನ್ನು ವ್ಯಾಪಿಸಲು ದಕ್ಷಿಣ ಕೊರಿಯಾ ಯತ್ನಿಸುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಸೋಲ್‌ ಮತ್ತು ಕೊರಿಯಾ ಗಣರಾಜ್ಯದ ಅಸ್ವಿತ್ವ ಉಳಿಯವುದೇ ಅಸಾಧ್ಯ‘ ಎಂದು ಕಿಮ್, ದಕ್ಷಿಣ ಕೊರಿಯಾ ಹೆಸರು ಉಲ್ಲೇಖಿಸಿಯೇ ಎಚ್ಚರಿಸಿದ್ದಾರೆ.

ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್‌ ಯೊಲ್, ಈಚೆಗೆ ಸೇನಾ ಪಡೆಗಳ ದಿನ ಕಾರ್ಯಕ್ರಮದಲ್ಲಿ ಅತ್ಯಾಧುನಿಕ ಕ್ಷಿಪಣಿ ಪ್ರದರ್ಶಿಸಿ ಮಾತನಾಡಿದ್ದರು. ‘ಉತ್ತರ ಕೊರಿಯಾ ಅಣ್ವಸ್ತ್ರ ಬಳಸಿದ ದಿನವೇ ಕಿಮ್‌ ಆಡಳಿತವೂ ಅಂತ್ಯವಾಗಲಿದೆ’ ಎಂದು ಎಚ್ಚರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.