ADVERTISEMENT

ಜಾಧವ್‌ ಪರ ಭಾರತ ವಕೀಲರ ವಾದಕ್ಕೆ ಅನುಮತಿ ಅಸಾಧ್ಯ: ಪಾಕಿಸ್ತಾನ

ಪಿಟಿಐ
Published 27 ಆಗಸ್ಟ್ 2020, 21:53 IST
Last Updated 27 ಆಗಸ್ಟ್ 2020, 21:53 IST
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್   

ಇಸ್ಲಾಮಾಬಾದ್‌:ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪರ ಭಾರತದ ವಕೀಲರೊಬ್ಬರಿಗೆ ವಾದ ಮಂಡನೆಗೆ ಅನುಮತಿ ನೀಡಲು ಸಾಧ್ಯ ಇಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಜಹೀದ್‌ ಹಫೀಜ್‌ ಚೌಧರಿ, ಈ ಸಂಬಂಧ ಭಾರತ ಮುಂದಿಟ್ಟಿರುವ ಬೇಡಿಕೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಭಾರತದ ವಕೀಲರು ಜಾಧವ್‌ ಪರ ವಕಾಲತ್ತು ವಹಿಸಲು ಅನುಮತಿ ನೀಡಬೇಕು ಎಂಬ ಆ ದೇಶದ ಬೇಡಿಕೆಯನ್ನೇ ಒಪ್ಪಲಾಗದು. ಈ ದೇಶದಲ್ಲಿ ವಕೀಲ ವೃತ್ತಿ ಕೈಗೊಳ್ಳಲು ಪರವಾನಗಿ ಹೊಂದಿರುವವರಿಗೆ ಮಾತ್ರ ಇಂಥ ಅವಕಾಶ ನೀಡಲಾಗುತ್ತದೆ’ ಎಂದರು.

ADVERTISEMENT

ಈ ಸಂಬಂಧದ ಅರ್ಜಿಯ ವಿಚಾರಣೆಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಸೆ.3ರಂದು ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.