ADVERTISEMENT

ಪ್ಯಾರಿಸ್‌: ನೊಟ್ರೆ ಡೇಮ್ ಕ್ಯಾಥೆಡ್ರಲ್ ಕ್ರಾಸ್ ಮರುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 25 ಮೇ 2024, 12:47 IST
Last Updated 25 ಮೇ 2024, 12:47 IST
...
...   

ಪ್ಯಾರಿಸ್: 2019ರ ಬೆಂಕಿ ಅವಘಡದಲ್ಲಿ ಹಾನಿಯಾಗಿದ್ದ ನೊಟ್ರೆ-ಡೇಮ್ ಡಿ ಪ್ಯಾರಿಸ್‌ನ ಮೇಲ್ಭಾಗದ ಶಿಲುಬೆಯನ್ನು ಕ್ಯಾಥೆಡ್ರಲ್‌ನ ಚೌಕಟ್ಟಿನ ಮೇಲೆ ಮರು ಸ್ಥಾಪಿಸಲಾಗಿದೆ.

12 ಮೀಟರ್ ವ್ಯಾಪಿಸಿರುವ 1.5 ಟನ್ ತೂಕ ಭವ್ಯವಾದ ಶಿಲುಬೆಯನ್ನು ಸರಿಸುಮಾರು 250 ಕಂಪನಿಗಳು ಮತ್ತು ನೂರಾರು ಕುಶಲಕರ್ಮಿಗಳು, ವಾಸ್ತುಶಿಲ್ಪಿಗಳು ಮತ್ತು ವೃತ್ತಿಪರರು ಸಿದ್ಧಪಡಿಸಿದ್ದಾರೆ. ಡಿಸೆಂಬರ್ 8ರಂದು ಕ್ಯಾಥೆಡ್ರಲ್‌ನ ಮರು ಉದ್ಘಾಟನೆ ನೆರವೇರಿಸಲು ಉದ್ದೇಶಿಸಲಾಗಿದೆ.

2019ರ ಏಪ್ರಿಲ್‌ 15ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಈ ಕ್ಯಾಥೆಡ್ರಲ್‌ಗೆ ಹಾನಿಯಾಗಿತ್ತು. ಇದು ಯುನೆಸ್ಕೊ ವಿಶ್ವ ಪಾರಂ‍ಪರಿಕ ತಾಣವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.