ಸ್ಟಾಕ್‌ಹೋಮ್: ಕಾದಂಬರಿಕಾರಅಬ್ದುಲ್‌ರಜಾಕ್ ಗುರ್ನಾಗೆ 2021ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಗುರುವಾರ ಘೋಷಣೆಯಾಗಿದೆ.
ಪೂರ್ವ ಆಫ್ರಿಕಾದ ತಾಂಜೇನಿಯಾದ (ಜಾಂಜಿಬಾರ್)ಅಬ್ದುಲ್‌ರಜಾಕ್ ಗುರ್ನಾಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಗಲ್ಫ್ ರಾಷ್ಟ್ರಗಳಲ್ಲಿನ ವಸಾಹತುಶಾಹಿಯ ಪರಿಣಾಮಗಳು,ಅಲ್ಲಿನ ಸಂಸ್ಕೃತಿ, ಏಷ್ಯಾ–ಆಫ್ರಿಕಾ ಖಂಡಗಳ ನಡುವಿನ ದೇಶಗಳಲ್ಲಿನವಲಸಿಗರ ಭವಿಷ್ಯದ ಕುರಿತಾದ ಸಹಾನುಭೂತಿ ಹಾಗೂ ರಾಜಿಯಿಲ್ಲದ ನಿಲುವುಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಸಮಿತಿ ತಿಳಿಸಿದೆ.
ಅಬ್ದುಲ್‌ರಜಾಕ್ ಗುರ್ನಾ ಅವರು ಮೂರು ಕಾದಂಬರಿಗಳನ್ನು ಬರೆದಿದ್ದಾರೆ. 1994ರಲ್ಲಿ ಅವರ ಮೊದಲ ಕಾದಂಬರಿ ’ಪ್ಯಾರಡೈಸ್’ ಪ್ರಕಟವಾಯಿತು. 2001ರಲ್ಲಿ ’ಬೈ ದಿ ಸೀ’, 2005ರಲ್ಲಿ 'ಡೆಜರ್ಸನ್’ ಕಾದಂಬರಿಯನ್ನು ಪ್ರಕಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.