ADVERTISEMENT

ದೇಗುಲಗಳ ವಿರುದ್ಧದ ದ್ವೇಷ ದಾಳಿಯಾಗಿ ಮಾರ್ಪಟ್ಟಿದೆ, ಮುಂದೇನು? ಚಂದ್ರ ಆರ್ಯ

ಕೆನಡಾದ ಗೌರಿ ಶಂಕರ ಮಂದಿರದ ಮೇಲೆ ದಾಳಿ, ಹಿಂದೂ ವಿರೋಧಿ ಬರಹಗಳ ಮೂಲಕ ಅವಹೇಳನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜನವರಿ 2023, 9:51 IST
Last Updated 31 ಜನವರಿ 2023, 9:51 IST
ಚಂದ್ರ ಆರ್ಯ
ಚಂದ್ರ ಆರ್ಯ   

ಟೊರೊಂಟೊ: ಕೆನಡಾದ ಬ್ರಾಂಪ್ಟನ್‌ ಪ್ರದೇಶದಲ್ಲಿ ದುಷ್ಕರ್ಮಿಗಳು ಹಿಂದೂ ದೇಗುಲವನ್ನು ವಿರೂಪಗೊಳಿಸಿರುವುದಕ್ಕೆ ಭಾರತ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಆಕ್ರೋಶಗೊಂಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಸಾಮಾಜಿಕ ಮಾಧ್ಯಮಕ್ಕೆ ಸೀಮಿತಗೊಂಡಿದ್ದ ದ್ವೇಷವು, ಈಗ ತೋಳ್ಬಲದ ದಾಳಿಯಾಗಿ ಮಾರ್ಪಟ್ಟಿದೆ. ಮುಂದೇನು? ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ಗುಂಪುಗಳ ಹಿಂದೂ ದೇಗುಲಗಳ ಮೇಲಿನ ದಾಳಿಯ ಸರಣಿಗೆ ಬ್ರಾಂಪ್ಟನ್‌ನಲ್ಲಿರುವ ಗೌರಿ ಶಂಕರ ಮಂದಿರದ ಮೇಲಿನ ದಾಳಿ ಸೇರ್ಪಡೆಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿದ್ದ ದ್ವೇಷ, ಈಗ ಹಿಂದೂ ದೇವಾಲಯಗಳ ಮೇಲಿನ ತೋಳ್ಬಲದ ದಾಳಿಯಾಗಿ ಮಾರ್ಪಟ್ಟಿದೆ. ಮುಂದೇನು? ಇದನ್ನು ಗಂಭೀರವಾಗಿ ಪರಿಗಣಿಸುವಂತೆ ನಾನು ಕೆನಡಾ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಬ್ರಾಂಪ್ಟನ್‌ನಲ್ಲಿರುವ ಗೌರಿ ಶಂಕರ ಮಂದಿರದ ಮೇಲಿನ ದಾಳಿಯನ್ನು ಖಂಡಿಸಿ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿ ಮಂಗಳವಾರ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.

‘ವಿಧ್ವಂಸಕ ಕೃತ್ಯವು ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ. ಕೆನಡಾದ ಅಧಿಕಾರಿಗಳಿಗೆ ನಮ್ಮ ಆತಂಕವನ್ನು ತಿಳಿಸಿದ್ದೇವೆ’ ಎಂದು ಕಾನ್ಸುಲೇಟ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಇವುಗಳನ್ನು ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.