ADVERTISEMENT

ತಂದೆಯಿಂದ ಮಗನಿಗೆ ಗೌರವ ಡಾಕ್ಟರೇಟ್‌

ಪಿಟಿಐ
Published 8 ಜುಲೈ 2024, 16:34 IST
Last Updated 8 ಜುಲೈ 2024, 16:34 IST
ಆಕಾಶ್‌ ಪೌಲ್‌
ಆಕಾಶ್‌ ಪೌಲ್‌   

ಲಂಡನ್‌: ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್‌ ಸ್ವರಾಜ್‌ ಪೌಲ್ ಅವರು ಕುಲಪತಿಗಳಾಗಿರುವ ವೋಲ್ವರ್‌ಹಾಂಪ್ಟನ್‌ ವಿಶ್ವವಿದ್ಯಾಲಯದಿಂದ, ಅವರ ಪುತ್ರ ಆಕಾಶ್‌ ಪೌಲ್ ಅವರಿಗೆ ಗೌರವ ಡಾಕ್ಟರೇಟ್‌ ಲಭಿಸಿದೆ. 

ಲಂಡನ್‌ ಮೃಗಾಲಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಇಬ್ರಾಹಿಂ ಆದಿಯ ಅವರು ಆಕಾಶ್‌ ಪೌಲ್ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು. 

ವೋಲ್ವರ್‌ಹಾಂಪ್ಟನ್‌ ವಿಶ್ವವಿದ್ಯಾಲಯಕ್ಕೆ ಸ್ವರಾಜ್‌ ಪೌಲ್‌ ಅವರು 26 ವರ್ಷಗಳಿಂದ ಕುಲಪತಿಗಳಾಗಿದ್ದಾರೆ.

ADVERTISEMENT

‘ತಂದೆಯಿಂದಲೇ ಗೌರವ ಡಾಕ್ಟರೆಟ್ ಪಡೆದ ಮಗ ನಾನು. ಈ ಗೌರವವನ್ನು ಹೆಮ್ಮೆ ಮತ್ತು ವಿನಮ್ರತೆಯಿಂದ ಸ್ವೀಕರಿಸಿದ್ದೇನೆ’ ಎಂದು ಆಕಾಶ್‌ ಪೌಲ್‌ ತಿಳಿಸಿದ್ದಾರೆ. 

‘1992ರಲ್ಲಿ ಕಪಾರೊ ಗ್ರೂಪ್‌ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕವಾದ ಆಕಾಶ್‌ ಸಂಸ್ಥೆಯನ್ನು ಮತ್ತಷ್ಟು ಬೆಳೆಸಿದ್ದಾರೆ. ಉದ್ಯಮ ಕ್ಷೇತ್ರದಲ್ಲಿನ ಅವರ ಸಾಧನೆಗೆ ಗೌರವ ಡಾಕ್ಟರೆಟ್‌ ಲಭಿಸಿದೆ’ ಎಂದು ಸ್ವರಾಜ್‌ ಪೌಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.