ADVERTISEMENT

ಫ್ರಾನ್ಸ್‌ ಸಚಿವರ ಜೊತೆ ಅಜಿತ್ ಡೊಭಾಲ್ ಭೇಟಿ, ಚರ್ಚೆ

ಪಿಟಿಐ
Published 1 ಅಕ್ಟೋಬರ್ 2024, 15:53 IST
Last Updated 1 ಅಕ್ಟೋಬರ್ 2024, 15:53 IST
<div class="paragraphs"><p>ಅಜಿತ್ ಡೊಭಾಲ್</p></div>

ಅಜಿತ್ ಡೊಭಾಲ್

   

ಪ್ಯಾರಿಸ್‌: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ಫ್ರಾನ್ಸ್‌ನ ಸೇನಾಪಡೆಗಳ ಸಚಿವ ಸೆಬಾಸ್ಟಿಯನ್‌ ಲೆಕೊರ್ನು ಅವರು ಮಂಗಳವಾರ ಭೇಟಿಯಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಿದರು.

‘ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಭಾಗಿತ್ವ, ರಕ್ಷಣಾ ಸಹಕಾರದ ಜೊತೆಗೆ ಜಾಗತಿಕ ರಾಜಕೀಯ ಬೆಳವಣಿಗೆ ಕುರಿತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಜೊತೆಗೆ ಚರ್ಚೆ ನಡೆಯಿತು’ ಎಂದು ಫ್ರಾನ್ಸ್‌ನಲ್ಲಿನ ಭಾರತೀಯ ರಾಯಭಾರಿ ‘ಎಕ್ಸ್‌’ ಮೂಲಕ ತಿಳಿಸಿದ್ದಾರೆ.  

ADVERTISEMENT

ಲೆಕೊರ್ನು ಅವರೂ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದ್ದು ‘ಉಕ್ರೇನ್‌ ಬೆಳವಣಿಗೆಯನ್ನು ಕೇಂದ್ರವಾಗಿಸಿ ಜಾಗತಿಕ ಪರಿಸ್ಥಿತಿ ಕುರಿತು ಚರ್ಚಿಸಲಾಯಿತು’ ಎಂದು ತಿಳಿಸಿದ್ದಾರೆ.

ಡೊಭಾಲ್‌ ಅವರು ಇದೇ ವೇಳೆ  ಫ್ರಾನ್ಸ್‌ನ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಅವರ ರಾಜತಾಂತ್ರಿಕ ಸಲಹೆಗಾರ ಇಮಾನ್ಯುಯೆಲ್ ಬಾನ್ ಅವರ ಜೊತೆಗೂ ಚರ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.