ADVERTISEMENT

ಅಫ್ಗನ್‌ ಗಡಿಗಳು ತಾಲಿಬಾನ್‌ ಕೈಗೆ: ಹೊರ ಹೋಗಲು ಕಾಬೂಲ್‌ ಏರ್ಪೋರ್ಟ್‌ ಏಕೈಕ ಮಾರ್ಗ

ಏಜೆನ್ಸೀಸ್
Published 15 ಆಗಸ್ಟ್ 2021, 8:21 IST
Last Updated 15 ಆಗಸ್ಟ್ 2021, 8:21 IST
ಕಾಬೂಲ್‌ ವಿಮಾನ ನಿಲ್ದಾಣದ ದೃಶ್ಯ (ಎಎಫ್‌ಪಿ ಚಿತ್ರ)
ಕಾಬೂಲ್‌ ವಿಮಾನ ನಿಲ್ದಾಣದ ದೃಶ್ಯ (ಎಎಫ್‌ಪಿ ಚಿತ್ರ)   

ಕಾಬೂಲ್‌: ಅಫ್ಗಾನಿಸ್ತಾನದ ಎಲ್ಲ ಗಡಿ ಮಾರ್ಗಗಳನ್ನು ತಾಲಿಬಾನ್‌ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ದೇಶದ ಬಹುತೇಕ ಭಾಗವನ್ನು ಈಗಾಗಲೇ ತನ್ನ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿಗಳು ಭಾನುವಾರ ಬೆಳಿಗ್ಗೆಯಷ್ಟೇ ಜಲಾಲಾಬಾದ್‌ ಎಂಬ ಪ್ರಮುಖ ನಗರವನ್ನು ಯಾವುದೇ ಪ್ರತಿರೋಧವಿಲ್ಲದೇ ಅನಾಯಾಸವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.

ಸದ್ಯದ ಮಾಹಿತಿ ಪ್ರಕಾರ, ದೇಶದಿಂದ ಹೊರಹೋಗುವ ಎಲ್ಲ ಗಡಿ ಮಾರ್ಗಗಳನ್ನು ತಾಲಿಬಾನ್‌ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಕಾಬೂಲ್‌ನ ವಿಮಾನ ನಿಲ್ದಾಣ ಮಾತ್ರವೇ ಈಗ ದೇಶದಿಂದ ಹೊರ ಹೋಗಲು ಇರುವ ಏಕೈಕಮಾರ್ಗವಾಗಿ ಉಳಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.