ದುಬೈ: ಒಂದು ವರ್ಷಕ್ಕೂ ಹೆಚ್ಚು ಕಾಲ ಇರಾನ್ ವಶದಲ್ಲಿದ್ದ ಕುವೈತ್‌ನ ತೈಲ ಸಾಗಣೆ ಹಡಗು ಗುರುವಾರ ಪ್ರಯಾಣ ಬೆಳೆಸಿದೆ ಎಂದು ಮೂಲಗಳು ತಿಳಿಸಿದೆ.
ಆದರೆ, ತನ್ನ ವಶದಲ್ಲಿದ್ದ ಹಡಗು ನಿರ್ಗಮಿಸಿರುವುದನ್ನು ಇರಾನ್ ಒಪ್ಪಿಕೊಂಡಿಲ್ಲ.
‘ಮಾರ್ಷಲ್ ಐಲ್ಯಾಂಡ್ಸ್’ ಧ್ವಜವಿದ್ದ ಟ್ಯಾಂಕರ್ ‘ಅಡ್ವಾಂಟೇಜ್ ಸ್ವೀಟ್’ ಕಳೆದ ವರ್ಷ ಏಪ್ರಿಲ್‌ನಲ್ಲಿ ಹಾರ್ಮುಜ್ ಜಲಸಂಧಿಯ ಕಡೆಗೆ ಪ್ರಯಾಣಿಸಿತ್ತು. ಆಗ ಇರಾನ್ ನೌಕಾಪಡೆ ಅದನ್ನು ವಶಪಡಿಸಿಕೊಂಡಿತ್ತು. ಆ ಹಡಗಿನಲ್ಲಿ 5 ಕೋಟಿ ಡಾಲರ್ ಮೌಲ್ಯದ ತೈಲವಿತ್ತು.
‘ಅಡ್ವಾಂಟೇಜ್ ಸ್ವೀಟ್’ ಮತ್ತೊಂದು ಹಡಗಿಗೆ ಡಿಕ್ಕಿ ಹೊಡೆದಿದೆ ಎಂಬ ಕಾರಣಕ್ಕೆ ಇರಾನ್ ಸರ್ಕಾರವು ವಶಪಡಿಸಿಕೊಂಡಿತ್ತು. ಆದರೆ, ಈ ಕುರಿತು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.