ಸಿಂಗಪುರ: ಹವಾಮಾನ ಬದಲಾವಣೆ ಮತ್ತು ಮಾನವರ ಅತಿಕ್ರಮಣವು ವಲಸೆ ಜೀವಿಗಳ ಮೇಲೆ ಅಗಾಧ ಪರಿಣಾಮ ಬೀರಿದ್ದು, ಜಗತ್ತಿನಲ್ಲಿ ವಲಸೆ ಹೋದ ಒಟ್ಟು ಜೀವಿಗಳಲ್ಲಿ ಐದನೇ ಒಂದರಷ್ಟು ಅಳಿವಿನ ಅಂಚಿಗೆ ಜಾರುವ ಅಪಾಯಕ್ಕೆ ಸಿಲುಕಿವೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
ವಲಸೆ ಜೀವಿಗಳ ಮೇಲೆ ನಡೆಸಿದ ಮೊದಲ ವರದಿಯನ್ನು ಪ್ರಕಟಿಸಿರುವ ವಿಶ್ವಸಂಸ್ಥೆ, ಈ ವಿಷಯವನ್ನು ಬಹಿರಂಗಪಡಿಸಿದೆ.
ಸಂತಾನೋತ್ಪತ್ತಿ ಮತ್ತು ಆಹಾರಕ್ಕಾಗಿ ಪ್ರತಿವರ್ಷ ಸಾವಿರಾರು ಜೀವಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವುದು ಸಾಮಾನ್ಯ. ಮಾನವ ಚಟುವಟಿಕೆಗಳು, ಹವಾಮಾನದಂತಹ ಅಂಶಗಳು ವಲಸೆ ಜೀವಿಗಳ ಸಂತಾನೋತ್ಪತ್ತಿ, ಆಹಾರದ ಮೇಲೆ ಪರಿಣಾಮ ಬೀರಿದಲ್ಲದೇ ಅವುಗಳ ವಾಸಸ್ಥಾನಕ್ಕೂ ಇವು ಬೆದರಿಕೆ ತಂದೊಡ್ಡಿದೆ ಎಂದು ವರದಿ ತಿಳಿಸಿದೆ.
1979ರ ವಲಸೆ ಪ್ರಾಣಿಗಳ ಸಂರಕ್ಷಣೆಗೆ ವಿಶ್ವಸಂಸ್ಥೆಯ ನಿರ್ಣಯದ ಅಡಿಯಲ್ಲಿ 1,189 ಪ್ರಬೇಧಗಳಲ್ಲಿ ಶೇ 44ರಷ್ಟು ಅಳವಿನಂಚಿಗೆ ಜಾರಿವೆ, ಶೇ 22ರಷ್ಟು ಕಣ್ಮರೆಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಈ ವರದಿಯು ವಲಸೆ ಜೀವಿಗಳ ಉಳಿವಿಗೆ ಸರ್ಕಾರಗಳು ಯಾವ ಕ್ರಮ ಕೈಗೊಳ್ಳಬೇಕೆಂಬುವುದಕ್ಕೆ ಸ್ಪಷ್ಟ ನಿರ್ದೇಶನ ನೀಡುತ್ತವೆ ಎಂದು ‘ಯುಎನ್ ಕನ್ವೆನ್ಷನ್’ನ ಕಾರ್ಯನಿರ್ವಾಹಕ ಕಾರ್ಯದರ್ಶಿ ಆಮಿ ಫ್ರಾಂಕೆಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.