ADVERTISEMENT

ಲಾಡೆನ್‌ ಪುತ್ರನ ಮಾಹಿತಿಗೆ ₹ 7 ಕೋಟಿ ಬಹುಮಾನ

ಅಮೆರಿಕದ ವಿದೇಶಾಂಗ ಇಲಾಖೆ ಘೋಷಣೆ

ಏಜೆನ್ಸೀಸ್
Published 1 ಮಾರ್ಚ್ 2019, 20:06 IST
Last Updated 1 ಮಾರ್ಚ್ 2019, 20:06 IST
 ಹಮ್ಝಾ ಬಿನ್‌ ಲಾಡೆನ್‌
 ಹಮ್ಝಾ ಬಿನ್‌ ಲಾಡೆನ್‌   

ವಾಷಿಂಗ್ಟನ್‌: ಭಯೋತ್ಪಾದನಾ ಸಂಘಟನೆ ಅಲ್‌ಖೈದಾ ಮುಖಂಡ ಒಸಾಮ ಬಿನ್‌ ಲಾಡೆನ್‌ ಪುತ್ರನ ಕುರಿತಂತೆ ಮಾಹಿತಿ ನೀಡುವವರಿಗೆ ₹ 7 ಕೋಟಿ (1 ದಶಲಕ್ಷ ಡಾಲರ್) ಬಹುಮಾನ ನೀಡುವುದಾಗಿ ಅಮೆರಿಕ ಗುರುವಾರ ಘೋಷಿಸಿದೆ.

ಲಾಡೆನ್‌ ಪುತ್ರ, ಹಮ್ಝಾ ಬಿನ್‌ ಲಾಡೆನ್‌ ಉಗ್ರವಾದದ ಹೊಸ ನಾಯಕನಾಗಿ ಹೊರಹೊಮ್ಮುತ್ತಿದ್ದಾನೆ. ‘ಜಿಹಾದ್‌ನ ಯುವರಾಜ’ ಎಂದೂ ಆತನನ್ನು ಕರೆಯಲಾಗುತ್ತಿದೆ. ಹಮ್ಝಾ ಬಿನ್‌ ಲಾಡೆನ್‌ ಎಲ್ಲಿ ಅಡಗಿದ್ದಾನೆ ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಪಾಕಿಸ್ತಾನ, ಅಫ್ಗಾನಿಸ್ತಾನ, ಸಿರಿಯಾ ಅಥವಾ ಇರಾನ್‌ನಲ್ಲಿ ಗೃಹಬಂಧನದಲ್ಲಿ ಇರಬಹುದು ಎಂಬ ವಾದಗಳಿವೆ.

‘ತನ್ನ ತಂದೆಯನ್ನು ಹತ್ಯೆ ಮಾಡಿರುವುದಕ್ಕೆ ಪ್ರತೀಕಾರವಾಗಿ ಅಮೆರಿಕದ ಮೇಲೆ ದಾಳಿ ನಡೆಸುವುದಾಗಿ 30 ವರ್ಷದ ಹಮ್ಝಾ ಬಿನ್‌ ಲಾಡೆನ್‌ ಬೆದರಿಕೆ ಒಡ್ಡಿದ್ದಾನೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ADVERTISEMENT

‘ಹಮ್ಝಾ ಬಿನ್‌ ಲಾಡೆನ್‌ ಎಲ್ಲಿದ್ದಾನೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆತ ಅಫ್ಗಾನಿಸ್ತಾನದಲ್ಲಿ ಆಶ್ರಯ ಪಡೆದಿರಬಹುದು’ ಎಂದುಹಮ್ಝಾ ಬಿನ್‌ ಲಾಡೆನ್‌ನ ಸಹೋದರರು ಕಳೆದ ವರ್ಷ ‘ದಿ ಗಾರ್ಡಿಯನ್‌’ ಪತ್ರಿಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

‘2011ರಲ್ಲಿ ಅಮೆರಿಕದ ಮೇಲೆ ದಾಳಿ ನಡೆಸಿದ್ದ ಅಲ್‌ಖೈದಾದ ಮುಂಚೂಣಿ ನಾಯಕ ಮೊಹಮ್ಮದ್ ಅಟ್ಟಾ ಪುತ್ರಿಯನ್ನು ಹಮ್ಝಾ ಬಿನ್‌ ಲಾಡೆನ್‌ ವಿವಾಹವಾಗಿದ್ದಾನೆ’ ಎಂದೂ ಅವರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.