ADVERTISEMENT

ಮೆಕ್ಸಿಕೊ: ವಿಮಾನದ ರೆಕ್ಕೆ ಮೇಲೆ ನಡೆದಾಡಿದ ಪ್ರಯಾಣಿಕ!

ಏಜೆನ್ಸೀಸ್
Published 27 ಜನವರಿ 2024, 15:46 IST
Last Updated 27 ಜನವರಿ 2024, 15:46 IST
   

ಮೆಕ್ಸಿಕೊ ಸಿಟಿ: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್‌ ಆಗಲು ಕಾಯುತ್ತಿದ್ದ ವಿಮಾನವೊಂದರ ತುರ್ತು ನಿರ್ಗಮನ ಬಾಗಿಲು ತೆರೆದು ಹೊರಹೋದ ಪ್ರಯಾಣಿಕರೊಬ್ಬರು ಅದರ ರೆಕ್ಕೆಯ ಮೇಲೆ ನಡೆದಾಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಗ್ವಾಟೆಮಾಲಾಕ್ಕೆ ತೆರಳಲಿದ್ದ ‘ಏರೋ ಮೆಕ್ಸಿಕೊ’ ವಿಮಾನದಲ್ಲಿ 77 ಮಂದಿ ಪ್ರಯಾಣಿಕರಿದ್ದರು. ಬಾಗಿಲು ತೆರೆದ ಪ್ರಯಾಣಿಕನನ್ನು ಪೊಲೀಸರ ವಶಕ್ಕೆ ನೀಡಿದ್ದೇವೆ ಎಂದಿದ್ದಾರೆ.

‘ವಿಮಾನವು ಟೇಕಾಫ್‌ಗಾಗಿ ನಾಲ್ಕು ಗಂಟೆ ಕಾದಿತ್ತು. ಕುಡಿಯುವ ನೀರು ಸಹ ನೀಡಿಲ್ಲ. ಸೆಕೆಯಿಂದ ನಾವು ಬಳಲಿದ್ದೆವು’ ಎಂದು ಇತರ ಪ್ರಯಾಣಿಕರು ದೂರಿದ್ದಾರೆ.

ADVERTISEMENT

ತುರ್ತು ನಿರ್ಗಮನ ಬಾಗಿಲು ತೆರೆಯಲು ನಾವೂ ಸಹಕರಿಸಿದ್ದೇವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿರುವ ಸಹ ಪ್ರಯಾಣಿಕರು, ವಿಮಾನದೊಳಗಿನ ದೃಶ್ಯಗಳಿರುವ ವಿಡಿಯೊ ಹಾಗೂ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ.

ವಿಮಾನದ ವಾತಾಯನ ವ್ಯವಸ್ಥೆ ಸರಿ ಇರಲಿಲ್ಲ. ಇದು ಪ್ರಯಾಣಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇತ್ತು. ಈ ಕಾರಣಕ್ಕೆ ಪ್ರಯಾಣಿಕರೊಬ್ಬರು ಬಾಗಿಲು ತೆಗೆದಿದ್ದಾರೆ ಎಂದೂ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ‘ಏರೋ ಮೆಕ್ಸಿಕೊ’ ವಿಮಾನಯಾನ ಸಂಸ್ಥೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.