ADVERTISEMENT

ನ್ಯೂಯಾರ್ಕ್: ಮೋದಿ ಕಾರ್ಯಕ್ರಮಕ್ಕೆ 24 ಸಾವಿರ ಮಂದಿ ನೋಂದಣಿ

ಅನಿವಾಸಿ ಭಾರತಿಯರನ್ನು ಉದ್ದೇಶಿಸಿ ಪ್ರಧಾನಿ ಭಾಷಣ

ಪಿಟಿಐ
Published 28 ಆಗಸ್ಟ್ 2024, 15:05 IST
Last Updated 28 ಆಗಸ್ಟ್ 2024, 15:05 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನ್ಯೂಯಾರ್ಕ್‌: ಮುಂದಿನ ತಿಂಗಳು ಅಮೆರಿಕಕ್ಕೆ ಭೇಟಿ ನೀಡಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಸೆ.22ರಂದು ನಡೆಯುವ ಈ ಬೃಹತ್‌ ಕಾರ್ಯಕ್ರಮದಲ್ಲಿ ಭಾಗಿಯಾಗಲು ಈಗಾಗಲೇ 24 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರು ನೋಂದಣಿ ಮಾಡಿಕೊಂಡಿದ್ದಾರೆ. 

‘ಮೋದಿ ಮತ್ತು ಅಮೆರಿಕ ಜೊತೆಯಾಗಿ ಅಭಿವೃದ್ಧಿ’ ಎನ್ನುವ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 

ADVERTISEMENT

‘ಕಾರ್ಯಕ್ರಮದ ಪಾಲುದಾರರಾಗಿರುವ 590 ಸಮುದಾಯ ಸಂಘಟನೆಗಳ ಮೂಲಕ ನೋಂದಣಿ ನಡೆಯುತ್ತಿದೆ. ಕನಿಷ್ಠ 42 ರಾಜ್ಯಗಳಿಂದ ಭಾರತೀಯರು ಆಗಮಿಸುವ ನಿರೀಕ್ಷೆಯಿದೆ. ಅದರಲ್ಲೂ ನ್ಯೂಯಾರ್ಕ್‌ ನಗರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಅಮೆರಿಕದಲ್ಲಿರುವ ಭಾರತೀಯ ಸಮುದಾಯ(ಐಎಸಿಯು) ತಿಳಿಸಿದೆ. 

ವಿಶ್ವಸಂಸ್ಥೆ ಬಿಡುಗಡೆಗೊಳಿಸಿರುವ ಪಟ್ಟಿಯ ಪ್ರಕಾರ, ಪ್ರಧಾನಿ ಮೋದಿಯವರು ಸೆ.26ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.