ADVERTISEMENT

ಮೋದಿ 3.0: ಅಮೆರಿಕದಲ್ಲಿ ಸಂಭ್ರಮಕ್ಕೆ ಸಿದ್ಧತೆ

ಪಿಟಿಐ
Published 8 ಜೂನ್ 2024, 14:12 IST
Last Updated 8 ಜೂನ್ 2024, 14:12 IST
ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿ ಅವರ ಗೆಲುವಿಗಾಗಿ ವಾಷಿಂಗ್ಟನ್‌ನಲ್ಲಿ ಹವನ ನೆರವೇರಿಸಿದ್ದ ಸಾಗರೋತ್ತರ ಸ್ನೇಹಿತರ ಬಳಗ–ಪಿಟಿಐ ಚಿತ್ರ
ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿ ಅವರ ಗೆಲುವಿಗಾಗಿ ವಾಷಿಂಗ್ಟನ್‌ನಲ್ಲಿ ಹವನ ನೆರವೇರಿಸಿದ್ದ ಸಾಗರೋತ್ತರ ಸ್ನೇಹಿತರ ಬಳಗ–ಪಿಟಿಐ ಚಿತ್ರ    

ವಾಷಿಂಗ್ಟನ್/ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ 22 ನಗರಗಳಲ್ಲಿ ಸಂಭ್ರಮಾಚರಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಅಮೆರಿಕದಲ್ಲಿನ ಬಿಜೆಪಿಯ ಸಾಗರೋತ್ತರ ಗೆಳೆಯರು (ಒಎಫ್‌ಬಿಜೆಪಿ) ಸಂಘಟನೆಯ ನಾಯಕರೊಬ್ಬರು ತಿಳಿಸಿದ್ದಾರೆ.

ನ್ಯೂಯಾರ್ಕ್, ಜೆರ್ಸಿ ಸಿಟಿ, ವಾಷಿಂಗ್ಟನ್, ಬಾಸ್ಟನ್, ತಂಪಾ, ಅಟ್ಲಾಂಟಾ, ಹ್ಯೂಸ್ಟನ್, ಡಲ್ಲಾಸ್, ಷಿಕಾಗೊ, ಲಾಸ್ ಏಂಜಲೀಸ್ ಮತ್ತು ಸ್ಯಾನ್‌ ಫ್ರಾನ್ಸಿಸ್ಕೋ ಮುಂತಾದ ನಗರಗಳಲ್ಲಿ ಈ ವಾರ ಮತ್ತು ಮುಂದಿನ ವಾರಗಳಲ್ಲಿ ಸಂಭ್ರಮಾಚರಣೆ ನಡೆಯಲಿದೆ.

‘ಅಮೆರಿಕದ 22 ನಗರಗಳಲ್ಲಿ ವಿಜಯದ ಸಂಭ್ರಮಾಚರಣೆಯು ಈ ಶುಕ್ರವಾರದಿಂದ ಮುಂದಿನ ಭಾನುವಾರದವರೆಗೆ ನಡೆಯಲಿದೆ’ ಎಂದು ಒಎಫ್‌ಬಿಜೆಪಿ–ಯುಎಸ್‌ಎ ಅಧ್ಯಕ್ಷ ಅಡಪ ಪ್ರಸಾದ್ ಪಿಟಿಐಗೆ ತಿಳಿಸಿದರು.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಮತ್ತೆ ಜಯ ಸಾಧಿಸಲಿ ಎಂದು ಪ್ರಾರ್ಥಿಸಿ ಒಎಫ್‌ಬಿಜೆಪಿ ಈ ಹಿಂದೆ ಅಮೆರಿಕದ ವಿವಿಧ ನಗರಗಳಲ್ಲಿ ಹವನ ಆಯೋಜಿಸಿತ್ತು.

ಮೋದಿಗೆ ಮಸ್ಕ್ ಅಭಿನಂದನೆ

ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ಅವರನ್ನು ಅಭಿನಂದಿಸಿರುವ ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ತಮ್ಮ ಕಂಪನಿಗಳು ಭಾರತದಲ್ಲಿ ಉತ್ತೇಜನಕಾರಿಯಾಗಿ ಕೆಲಸ ಮಾಡಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ.

ಎಲಾನ್ ಮಸ್ಕ್ ಅವರ ‘ಎಕ್ಸ್’ ಪೋಸ್ಟ್‌ಗೆ ಅದೇ ವೇದಿಕೆಯಲ್ಲೇ ಪ್ರತಿಕ್ರಿಯೆ ನೀಡಿರುವ ನರೇಂದ್ರ ಮೋದಿ ಅವರು ‘ನಿಮ್ಮ ಶುಭಾಶಯಗಳಿಗೆ ಕೃತಜ್ಞನಾಗಿದ್ದೇನೆ’ ಎಂದು ತಿಳಿಸಿದ್ದಾರೆ.  

‘ಭಾರತದ ಪ್ರತಿಭಾವಂತ ಯುವಜನತೆ ದೇಶದ ಜನಸಂಖ್ಯೆ ಅನುಕೂಲಕರ ನೀತಿಗಳು ಮತ್ತು ಸ್ಥಿರ ಸರ್ಕಾರವು ತನ್ನ ಎಲ್ಲ ಪಾಲುದಾರರಿಗೆ ಉದ್ದಿಮೆ ಮಾಡಲು ಸೂಕ್ತ ವಾತಾವರಣ ಒದಗಿಸುವುದನ್ನು ಮುಂದುವರೆಸಲಿದೆ’ ಎಂದು ಮೋದಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.