ವಿಶ್ವಸಂಸ್ಥೆ: ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ಆಸ್ಮಾ ಜಹಾಂಗೀರ್ ಅವರಿಗೆ ಮರಣೋತ್ತರವಾಗಿ2018ರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರಶಸ್ತಿ ಸಂದಿದೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷೆ ಮರಿಯಾ ಫೆರ್ನಾಂಡಾ ಎಸ್ಪಿನೊಸಾ, ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಜಹಾಂಗೀರ್ ಅವರ ಪುತ್ರಿ ಮುನಿಜೇ ಅವರಿಗೆ ನೀಡಿದರು.
ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿದ್ದ ಆಸ್ಮಾ, ಸೇನಾ ಸರ್ವಾಧಿಕಾರ, ಭಯೋತ್ಪಾದನೆಯ ವಿರುದ್ಧ ದನಿ ಎತ್ತಿದ್ದರು. ಅಲ್ಪಸಂಖ್ಯಾತರ ಪರವಾಗಿ ಹೋರಾಟ ನಡೆಸಿದ್ದರು. ಕಳೆದ ಫೆಬ್ರುವರಿಯಲ್ಲಿ ಹೃದಯಾಘಾತದಿಂದ ಇವರು ಮೃತಪಟ್ಟಿದ್ದರು.
ತಾಂಜಾನಿಯಾದಮಹಿಳಾ ಶಿಕ್ಷಣದ ಹೋರಾಟಗಾರ್ತಿ ರೆಬಿಕಾ ಗಿಯುಮಿ, ಬ್ರೆಜಿಲ್‌ನ ಮಹಿಳಾ ವಕೀಲರಾದ ಜೊಯೆನಿಯಾ ಬಟಿಸ್ಟಾ ಅವರಿಗೂ ಹಾಗೂ ಐರ್ಲೆಂಡಿನ ಫ್ರಂಟ್ ಲೈನ್ ಡಿಫೆಂಡರ್ಸ್ ಎನ್ನುವ ಮಾನವ ಹಕ್ಕುಗಳ ಸಂಘಟನೆಗೆ ಪ್ರಶಸ್ತಿ ನೀಡಲಾಗಿದೆ.
1968 ರಿಂದ ವಿಶ್ವಸಂಸ್ಥೆ ಪ್ರತಿ ಐದು ವರ್ಷಗಳಿಗೊಮ್ಮೆ ಮಾನವ ಹಕ್ಕುಗಳ ಹೋರಾಟಗಾರರಿಗೆ ಈ ಪ್ರಶಸ್ತಿಯನ್ನು ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.