ಇಸ್ಲಾಮಾಮಾದ್: ನಮ್ಮ ದೇಶವು ನೈತಿಕವಾಗಿ ಅಧಃಪತನದತ್ತ ಸಾಗುತ್ತಿರುವದು ದುರದುಷ್ಟಕರ ಎಂದು ಪಾಕಿಸ್ತಾನದ ನಟಿ ಸಜಲ್ ಅಲಿ ಹೇಳಿದ್ದಾರೆ.
ಪಾಕಿಸ್ತಾನ ರಕ್ಷಣಾ ಇಲಾಖೆಯ ನಿವೃತ ಅಧಿಕಾರಿ ಹಾಗೂ ಯುಟ್ಯೂಬರ್ ಆಗಿರುವ ಆದಿಲ್ ರಾಜಾ ಅವರು ‘ನಟಿಯರನ್ನು ದೇಶದ ಪ್ರಬಲ ಸಂಸ್ಥೆಗಳು 'ಹನಿ ಟ್ರ್ಯಾಪ್' ಆಗಿ ಬಳಸಿಕೊಂಡಿವೆ‘ ಎಂದು ವಿಡಿಯೊ ಮೂಲಕ ಹೇಳಿದ್ದರು. ಅವರ ಈ ಹೇಳಿಕೆ ಪಾಕಿಸ್ತಾನದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ಆದಿಲ್ ರಾಜಾ ಅವರು 'ಸೋಲ್ಜರ್ ಸ್ಪೀಕ್ಸ್' ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಇದಕ್ಕೆ 3 ಲಕ್ಷ ಚಂದಾದಾರರಿದ್ದಾರೆ. ಕೆಲವು ದಿನಗಳ ಹಿಂದೆ ವಿಡಿಯೊಂದನ್ನು ಬಿಡುಗಡೆ ಮಾಡಿರುವ ಅವರು ಕೆಲವು ನಟಿಯರನ್ನು ದೇಶದ ಪ್ರಬಲ ಸಂಸ್ಥೆಗಳು 'ಹನಿ ಟ್ರ್ಯಾಪ್' ಆಗಿ ಬಳಸಿಕೊಂಡಿವೆ ಎಂದು ಹೇಳಿದ್ದರು. ನಟಿಯರ ಹೆಸರನ್ನು ಬಹಿರಂಗಪಡಿಸದೇ ಅವರು 'ಹನಿ ಟ್ರ್ಯಾಪ್'ಗೆ ಬಳಸಿಕೊಂಡಿದ್ದ ಕೆಲ ನಟಿಯರ ಹೆಸರಿನ ಮೊದಲ ಅಕ್ಷರಗಳನ್ನು ಅವರು ಹೇಳಿದ್ದರು.
ಇದನ್ನು ಗ್ರಹಿಸಿದ ನೆಟ್ಟಿಗರು ನಟಿ ಸಜಲ್ ಅಲಿ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಿದ್ದರು. ನಿವೃತ ಅಧಿಕಾರಿ ಆದಿಲ್ ರಾಜಾ ಸೇರಿದಂತೆ ಟ್ರೋಲಿಗರಿಗೆ ನಟಿ ಸಜಲ್ ಅಲಿ ಟ್ವೀಟ್ ಮೂಲಕ ಖಡಕ್ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ನಮ್ಮ ದೇಶವು ನೈತಿಕವಾಗಿ ಅಧಃಪತನದತ್ತ ಸಾಗುತ್ತಿರುವುದು ದುರದುಷ್ಟಕರ. ನನ್ನ ಮೇಲೆ ಚಾರಿತ್ರ್ಯಹರಣದ ಆರೋಪ ಮಾಡಿರುವುದು ಪಾಪದ ಕೆಲಸ‘ ಎಂದು ಹೇಳಿದ್ದಾರೆ.
ಆದಿಲ್ ರಾಜಾ ಅವರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ನಟಿ ಸಜಲ್ ವಿರುದ್ಧ ಟ್ರೋಲ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಟ್ರೋಲಿಗರು ಹಾಗೂ ಆದಿಲ್ ರಾಜಾ ಅವರ ನಡೆಯನ್ನು ಖಂಡಿಸಿದ್ದಾರೆ.
ಸಜಲ್ ಅಲಿ ಬಾಲಿವುಡ್ ಥ್ರಿಲ್ಲರ್ 'ಮಾಮ್' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ದಿವಂಗತ ನಟಿ ಶ್ರೀದೇವಿ ಅವರ ಮಗಳಾಗಿ ನಟಿಸಿದ್ದರು. ಜೀ 5ನಲ್ಲಿ ಪ್ರಸಾರವಾದ ವೆಬ್‌ಸರಣಿಯೊಂದರಲ್ಲೂ ನಟಿಸಿ ಗಮನ ಸೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.