ಇಸ್ಲಾಮಾಬಾದ್: ‘ಪಾಕಿಸ್ತಾನಿ ಸೇನೆಯು ಸಿಂಧ್ ಪ್ರಾಂತ್ಯದ ಥಾರ್ ಮರುಭೂಮಿಯಲ್ಲಿ ಒಂದು ತಿಂಗಳ ಸಮರಾಭ್ಯಾಸವನ್ನು ಕೈಗೊಂಡಿದ್ದು, ಇದೇ 28ರಂದು ಅದು ಕೊನೆಗೊಳ್ಳಲಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಜನವರಿ 28 ರಿಂದ ‘ಜಿದರ್–ಉಲ್–ಹದೀದ್’ ಹೆಸರಿನ ಈ ಸಮರಾಭ್ಯಾಸ ಆರಂಭವಾಗಿದೆ. ಮರುಭೂಮಿಯ ಯುದ್ಧತಂತ್ರಗಳನ್ನು ಅಳವಡಿಸಿಕೊಳ್ಳುವುದು ಇದರ ಉದ್ದೇಶ’ ಎಂದು ತಿಳಿಸಲಾಗಿದೆ.
ಬಹುರಾಷ್ಟ್ರಗಳ ನೌಕಾಭ್ಯಾಸ: ಅರಬ್ಬೀ ಸಮುದ್ರದಲ್ಲಿ ಸುಮಾರು 45 ರಾಷ್ಟ್ರಗಳು ಪಾಲ್ಗೊಂಡಿರುವ ಹಾಗೂ ಪಾಕಿಸ್ತಾನ ಆತಿಥ್ಯ ವಹಿಸಿರುವ ಒಂದು ವಾರದ ನೌಕಾ ಸಮರಾಭ್ಯಾಸ ಶುಕ್ರವಾರದಿಂದ ಆರಂಭವಾಗಿದೆ. 2007ರಿಂದೀಚೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ಇದನ್ನು ಸಂಘಟಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.