ಪೇಶಾವರ: ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆಯಾದ ಲಷ್ಕರ್ ಇ ಇಸ್ಲಾಂ, ತನ್ನ ನೂತನ ಮುಖ್ಯಸ್ಥನಾಗಿ ಜಲಾ ಖಾನ್ ಅಫ್ರಿದಿಯನ್ನು ಘೋಷಿಸಿದೆ.
ಅಫ್ಗಾನಿಸ್ತಾನದಲ್ಲಿ ಇತ್ತೀಚೆಗೆಗಷ್ಟೇ ನಡೆದಿದ್ದ ಬಾಂಬ್ ಸ್ಫೋಟದಲ್ಲಿ ಸಂಘಟನೆಯ ಮುಖ್ಯಸ್ಥ ಮಂಗಲ್ ಭಾಗ್ ಮೃತಪಟ್ಟಿದ್ದ. ಖೈಬರ್ ಪಖ್‌ತುನ್‌ಖ್ವಾ ಪ್ರಾಂತ್ಯದ ಬಂದರ್ ಪ್ರದೇಶದಲ್ಲಿ ಸಂಘಟನೆಯ ಸದಸ್ಯರು ಸಭೆ ನಡೆಸಿ, ಭಾಗ್‌ಗೆ ನಿಕಟವರ್ತಿಯಾಗಿದ್ದ ಅಫ್ರಿದಿಯನ್ನು ಮುಖ್ಯಸ್ಥನನ್ನಾಗಿ ಆಯ್ಕೆ ಮಾಡಿದೆ. ಅಫ್ರಿದಿ, ಇದೇ ಪ್ರಾಂತ್ಯದ ಬಾರಾ ತಾಲ್ಲೂಕಿನ ಅಕಾಖೆಲ್ ವರ್ಗಕ್ಕೆ ಸೇರಿದವನಾಗಿದ್ದಾನೆ. ಸಂಘಟನೆಯ ಮಂಡಳಿಯು, ಭಾಗ್‌ನ ಮಗ ತಯಾಬ್ ಅಲಿಯಾಸ್ ಅಜ್‌ನಬಿಯನ್ನು ನೂತನ ಉಪ ಕಮಾಂಡರ್ ಆಗಿ ಘೋಷಿಸಿದೆ.
ಅಮೆರಿಕದವರು ಭಾಗ್ ತಲೆಗೆ ₹21 ಕೋಟಿ ಬಹುಮಾನ ಘೋಷಿಸಿದ್ದು, ಹಲವು ಉಗ್ರ ಚಟುವಟಿಕೆಗಳಲ್ಲಿ ಈತ ಭಾಗಿಯಾಗಿದ್ದ. ಗುರುವಾರ ಅಫ್ಗಾನಿಸ್ತಾನದ ಬಂದರ್ ದಾರಾ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ಹುದುಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡು ಭಾಗ್ ಸೇರಿದಂತೆ ಆತನ ಇಬ್ಬರು ಸಹಚರರು ಮೃತಪಟ್ಟಿದ್ದಾರೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.