ADVERTISEMENT

ಪಾಕಿಸ್ತಾನ: ಜೆಯುಡಿ ವಕ್ತಾರನಿಗೆ 32 ವರ್ಷ ಜೈಲು ಶಿಕ್ಷೆ

ಪಿಟಿಐ
Published 12 ನವೆಂಬರ್ 2020, 6:26 IST
Last Updated 12 ನವೆಂಬರ್ 2020, 6:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಾಹೋರ್‌: ಮುಂಬೈ ದಾಳಿ ಸಂಚುಕೋರ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌ ಉದ್‌ ದವಾ (ಜೆಯುಡಿ) ಸಂಘಟನೆಯ ವಕ್ತಾರ ಯಾಹ್ಯಾ ಮುಜಾಹಿದ್‌ಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್‌ 32 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿದೆ.

ಭಯೋತ್ಪಾದನಾ ಚಟುವಟಿಕೆಯ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಶಿಕ್ಷೆ ವಿಧಿಸಲಾಗಿದೆ.

ಅಲ್ಲದೆ ಜೆಯುಡಿ ಸಂಘಟನೆಯ ಇತರ ನಾಯಕರಾದ ಪ್ರೊ. ಇಕ್ಬಾಲ್‌ ಮತ್ತು ಪ್ರೊ ಹಫೀಜ್‌ ಅಬ್ದುಲ್‌ ರೆಹಮಾನ್‌ (ಸಯೀದ್‌ ಸೋದರ ಸಂಬಂಧಿ) ಅವರಿಗೆ ಕ್ರಮವಾಗಿ 16 ವರ್ಷ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.