ADVERTISEMENT

ತೋಷಖಾನಾ ಪ್ರಕರಣ: ಪ್ರಕರಣ ರದ್ದತಿ ಕೋರಿದ್ದ ಇಮ್ರಾನ್‌ ಅರ್ಜಿ ವಜಾ

ಪಿಟಿಐ
Published 14 ನವೆಂಬರ್ 2024, 13:11 IST
Last Updated 14 ನವೆಂಬರ್ 2024, 13:11 IST
ಇಮ್ರಾನ್‌ ಖಾನ್‌ 
ಇಮ್ರಾನ್‌ ಖಾನ್‌    

ಇಸ್ಲಾಮಾಬಾದ್: ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ತ‌ಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಪತ್ನಿ ಬುಶ್ರಾ ಬೀಬಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯವು ವಜಾಗೊಳಿಸಿದೆ. 

ಅರ್ಜಿಯನ್ನು ತಿರಸ್ಕರಿಸಿದ, ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಾರುಖ್‌ ಅರ್ಜುಮಂದ್ ಅವರು, ಇಮ್ರಾನ್‌ ಖಾನ್‌ ಹಾಗೂ ಬುಶ್ರಾ ವಿರುದ್ಧ ಸೋಮವಾರ ದೋಷಾರೋಪ ನಿಗದಿ ಮಾಡುವುದಾಗಿ ತಿಳಿಸಿದರು. ಇಮ್ರಾನ್‌ ಅವರು ಸದ್ಯ ಅಡಿಯಾಲಾ ಜೈಲಿನಲ್ಲಿದ್ದಾರೆ. 

ಸರ್ಕಾರದ ಮುಖ್ಯಸ್ಥರು, ಪ್ರಮುಖರಿಗೆ ಬರುವ ಉಡುಗೊರೆಗಳು ತೋಷಖಾನಾ ಇಲಾಖೆ ಸುಪರ್ದಿಗೆ ಹೋಗಲಿವೆ. ಇಂತಹ ಉಡುಗೊರೆಗಳ ಪೈಕಿ ದುಬಾರಿ ಮೌಲ್ಯದ ಗಡಿಯಾರವೊಂದನ್ನು ಇಮ್ರಾನ್‌ ಹೆಚ್ಚಿನ ಬೆಲೆಗೆ ಮಾರಿಕೊಂಡು, ಲಾಭ ಗಳಿಸಿದ್ದರು ಎಂಬ ಆರೋಪ ಇದೆ. ಇದನ್ನು ತೋಷಖಾನಾ ಪ್ರಕರಣ ಎಂದು ಕರೆಯಲಾಗುತ್ತದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.