ADVERTISEMENT

ಬೆಂಬಲ ಪಡೆದ ಪಾಕ್‌| ಎಫ್‌ಎಟಿಎಫ್‌ನಿಂದ ಕಪ್ಪುಪಟ್ಟಿಯಿಂದ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 20:05 IST
Last Updated 21 ಜೂನ್ 2019, 20:05 IST
FATF
FATF   

ಇಸ್ಲಾಮಾಬಾದ್: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌)ಯಿಂದ ಕ‍ಪ್ಪುಪಟ್ಟಿಗೆ ಸೇರದಂತೆ ಟರ್ಕಿ, ಚೀನಾ ಮತ್ತು ಮಲೇಷ್ಯಾದ ಬೆಂಬಲ ಪಡೆಯುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದೆ. ಈ ಮೂರೂ ಎಫ್‌ಎಟಿಎಫ್‌ನ ಸದಸ್ಯ ದೇಶಗಳು ಎಂದು ಡಾನ್ ವರದಿ ಮಾಡಿದೆ.

ಕಪ್ಪುಪಟ್ಟಿಗೆ ಸೇರಿಸದೇ ಇರುವ ಬಗ್ಗೆ ಅಕ್ಟೋಬರ್‌ 13 ರಿಂದ 18 ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಎಫ್‌ಎಟಿಎಫ್‌ನ ಅಧಿವೇಶನದಲ್ಲಿ ತೀರ್ಮಾನ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT