ADVERTISEMENT

ಪಾಕಿಸ್ತಾನದಿಂದ ಭಯೋತ್ಪಾದನೆ ನಿರ್ಮೂಲನೆ ಮಾಡುತ್ತೇವೆ: ಪ್ರಧಾನಿ ಶೆಹಬಾಜ್

ಪಿಟಿಐ
Published 10 ಜೂನ್ 2024, 14:25 IST
Last Updated 10 ಜೂನ್ 2024, 14:25 IST
..
..   

ಇಸ್ಲಾಮಾಬಾದ್‌: ಖೈಬರ್‌ ಪಖ್ತುಂಖ್ವಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಏಳು ಜನ ಯೋಧರು ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಪ್‌, ಭಯೋತ್ಪಾದನೆಯನ್ನು ದೇಶದಿಂದ ನಿರ್ಮೂಲನೆ ಮಾಡುವುದಾಗಿ ತಿಳಿಸಿದ್ದಾರೆ.

ಲಕ್ಕಿ ಮರ್ವತ್‌ ಜಿಲ್ಲೆಯ ಸರ್ಬಂದ್‌ ಬಳಿ ಭಾನುವಾರ ಭದ್ರತಾ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದರು. ಆರಂಭದಲ್ಲಿ ಬಾಂಬ್‌ ದಾಳಿ ನಡೆಸಿದ ಉಗ್ರರು ಬಳಿಕ ಗುಂಡಿನ ದಾಳಿ ಆರಂಭಿಸಿದ್ದರು. ಘಟನೆಯಲ್ಲಿ ಕ್ಯಾಪ್ಟನ್‌ ಸೇರಿ 7 ಜನ ಯೋಧರು ಮೃತಪಟ್ಟಿದ್ದರು.

‘ದೇಶದ ಯೋಧರು ಮತ್ತು ನಾಗರಿಕರ ತ್ಯಾಗವನ್ನು ಸಾರ್ಥಕಗೊಳಿಸುವ ಉದ್ದೇಶದಿಂದ ದೇಶದಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಪಣ ತೊಟ್ಟಿದ್ದೇವೆ’ ಎಂದು ಷರೀಪ್‌ ಅವರು ‘ಎಕ್ಸ್‌’ ಖಾತೆಯಲ್ಲಿ ತಿಳಿಸಿದ್ದಾರೆ. 

ADVERTISEMENT

ಲಕ್ಕಿ ಮರ್ವತ್‌ ಜಿಲ್ಲೆಯು ತೆಹ್ರಿಕ್‌ –ಇ–ತಾಲಿಬಾನ್‌ ಪಾಕಿಸ್ತಾನ(ಟಿಟಿಪಿ) ಸಂಘಟನೆಯು ಭಯೋತ್ಪಾದಕರ ಕೇಂದ್ರವಾಗಿದ್ದು, ಟಿಟಿಪಿಯನ್ನು ನಿಯಂತ್ರಿಸುವುದು ಪಾಕಿಸ್ತಾನಕ್ಕೆ ಸವಾಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.