ಇಸ್ಲಾಮಾಬಾದ್: ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮುಖ್ಯಸ್ಥ ನವಾಜ್ ಷರೀಫ್ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರದ ನೇತೃತ್ವ ವಹಿಸಬೇಕು ಎಂದು ಪ್ರಧಾನಿ ಶೆಹಬಾಜ್ ನವಾಜ್ ಮನವಿ ಮಾಡಿದ್ದಾರೆ ಎಂದು ಜಿಯೋ ನ್ಯೂಸ್ ಶನಿವಾರ ತಿಳಿಸಿದೆ.
ಪಿಎಂಎಲ್-ಎನ್ ಅಧ್ಯಕ್ಷರಾಗಿ ಪುನರಾಯ್ಕೆಯಾದ ಬಳಿಕ ಶನಿವಾರ ನಡೆದ ಪಕ್ಷದ ಸಭೆಯಲ್ಲಿ ಶೆಹಬಾಜ್, ನವಾಜ್ ಷರೀಫ್ ಶೀಘ್ರದಲ್ಲೇ ದೇಶಕ್ಕೆ ಮರಳಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ ಎಂದು ವರದಿ ಮಾಡಿದೆ.
ತಮ್ಮ ಹಿರಿಯ ಸಹೋದರ ಷರೀಫ್ ಅವರು ಲಂಡನ್‌ನಿಂದ ಹಿಂದಿರುಗಿ, ನಾಲ್ಕನೇ ಬಾರಿಗೆ ದೇಶದ ಪ್ರಧಾನಿ ಆಗುವಂತೆ ಅವರು ಒತ್ತಾಯಿಸಿದ್ದಾರೆ.
ಪಿಎಂಎಲ್-ಎನ್ ಗೆ ಯುವ ನಾಯಕತ್ವದ ಅಗತ್ಯವಿದೆ. ನವಾಜ್ ಷರೀಫ್ ಅವರ ಮಗಳು, ಪಕ್ಷದ ಹಿರಿಯ ಉಪಾಧ್ಯಕ್ಷೆ 49 ವರ್ಷದ ಮರಿಯಂ ನವಾಜ್ ಅವರ ಕಠಿಣ ಪರಿಶ್ರಮವನ್ನು ಶೆಹಬಾಜ್ ಸಭೆಯಲ್ಲಿ ಶ್ಲಾಘಿಸಿದ್ದಾರೆ.
ನವಾಜ್ ಷರೀಫ್ ಅವರು 2019ರಿಂದ ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಅವರನ್ನು ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದ ನಂತರ ಶೆಹಬಾಜ್ ಷರೀಫ್ ಅವರಿಗೆ ಪಿಎಂಎಲ್-ಎನ್ ಅಧ್ಯಕ್ಷ ಸ್ಥಾನ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.