ADVERTISEMENT

ಪಾಕ್‌ ಮಾತುಕತೆಗೆ ಸಿದ್ಧ: ಸಚಿವ ಖುರೇಶಿ

ಪಿಟಿಐ
Published 15 ಜೂನ್ 2019, 20:00 IST
Last Updated 15 ಜೂನ್ 2019, 20:00 IST
   

ಬಿಷ್ಕೆಕ್‌: ‘ಸಮಾನತೆ ತತ್ವದ ಆಧಾರದ ಮೇಲೆ ಗೌರವಯತವಾಗಿ ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದೆ. ಬಾಕಿ ಉಳಿದಿರುವ ಎಲ್ಲ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಇಸ್ಲಾಮಾಬಾದ್‌ ಜತೆಗೆ ತನ್ನನ್ನು ತೊಡಗಿಸಿಕೊಳ್ಳುವುದು ನವದೆಹಲಿಗೆ ಬಿಟ್ಟ ವಿಚಾರ’ ಎಂದು ವಿದೇಶಾಂಗ ಸಚಿವ ಶಾ ಮೆಹ್ಮೂದ್‌ ಖುರೇಶಿ ಹೇಳಿದ್ದಾರೆ.

ಇಲ್ಲಿ ನಡೆದ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಖುರೇಶಿ, ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕೈಕುಲಕಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

‘ಭಾರತ ಸರ್ಕಾರ ಇನ್ನೂ ಚುನಾವಣೆಯ ಮನಸ್ಥಿತಿಯೆಲ್ಲಿಯೇ ಇದೆ. ಆದರೆ, ಪಾಕಿಸ್ತಾನವು ತನ್ನ ಉದ್ದೇಶವನ್ನು ತಿಳಿಸಿದೆ. ನಮಗೇನೂ ತರಾತುರಿ ಇಲ್ಲ, ತೊಂದರೆಯೂ ಇಲ್ಲ. ದ್ವಿಪಕ್ಷೀಯ ಮಾತುಕತೆ ಕುರಿತು ಭಾರತ ನಿರ್ಧಾರ ತೆಗೆದುಕೊಳ್ಳಲಿ’ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.