ADVERTISEMENT

ಭಾರತದಿಂದ ಹಾರಿ ಬಂದ ವಸ್ತುವೊಂದು ಅಪ್ಪಳಿಸಿದೆ: ಪಾಕ್‌ ಸೇನೆ ಆರೋಪ

ಪಿಟಿಐ
Published 11 ಮಾರ್ಚ್ 2022, 2:12 IST
Last Updated 11 ಮಾರ್ಚ್ 2022, 2:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಭಾರತದಿಂದ ಚಿಮ್ಮಿದ ಅತ್ಯಂತ ವೇಗವಾಗಿ ಮತ್ತು ಎತ್ತರದಲ್ಲಿ ಹಾರುವ ವಸ್ತುವೊಂದು ಪಾಕಿಸ್ತಾನದ ವಾಯು ಪ್ರದೇಶವನ್ನು ಪ್ರವೇಶಿಸಿದ್ದು, ಪಂಜಾಬ್‌ ಪ್ರಾಂತ್ಯದಲ್ಲಿ ಅಪ್ಪಳಿಸಿದೆ ಎಂದು ಪಾಕಿಸ್ತಾನ ಸೇನೆ ಆರೋಪ ಮಾಡಿದೆ.

'ಮಾರ್ಚ್ 9ರಂದು ಸಂಜೆ 6.30ಕ್ಕೆ ಪಾಕಿಸ್ತಾನದ ಪ್ರದೇಶದಲ್ಲಿ ಎತ್ತರ ಮತ್ತು ವೇಗವಾಗಿ ಹಾರುವ ವಸ್ತುವೊಂದು ಅಪ್ಪಳಿಸಿದೆ. ಇದು ಭಾರತದ ಪ್ರದೇಶದಿಂದ ಚಿಮ್ಮಿದ್ದಾಗಿದೆ. ಇದರಿಂದ ನಾಗರಿಕರ ಅಲ್ಪ ಸೊತ್ತಿಗೆ ಹಾನಿಯಾಗಿದ್ದು, ಜೀವ ಹಾನಿಯಾಗಿಲ್ಲ ಎಂದು ಪಾಕಿಸ್ತಾನ ಸೇನೆಯ ವಕ್ತಾರ ಬಾಬರ್‌ ಇಫ್ತಿಕರ್‌ ಹೇಳಿದ್ದಾರೆ.

ಪಾಕ್‌ ಆರೋಪಕ್ಕೆ ತಕ್ಷಣ ಭಾರತ ಸ್ಪಂದಿಸಿಲ್ಲ.

ADVERTISEMENT

'ಪಂಜಾಬ್‌ನ ಖಾನೆವಾಲ್‌ ಜಿಲ್ಲೆಯ ಮಿಯಾನ್‌ ಚಾನ್ನು ಎಂಬ ಪ್ರದೇಶದಲ್ಲಿ ಬುಧವಾರ ರಾತ್ರಿ ಹಾರುವ ವಸ್ತುವೊಂದು ಅಪ್ಪಳಿಸಿದೆ. ಸುಮಾರು 40,000 ಅಡಿ ಎತ್ತರದಲ್ಲಿ ಹಾರಿ ಬಂದಿದ್ದು, ಪತನಗೊಳ್ಳುವ ಮೊದಲು ಸುಮಾರು 207 ಕಿ.ಮೀ. ದೂರದಿಂದ ಬಂದಿದೆ. ಇದು ಹಾರಿಬಂದ ಮಾರ್ಗ ಉಭಯ ರಾಷ್ಟ್ರಗಳ ನಾಗರಿಕರಿಗೆ ಅಪಾಯಕಾರಿಯಾಗಿದೆ. ಭಾರತವು ಇದಕ್ಕೆ ಸಮರ್ಪಕ ಉತ್ತರ ನೀಡಬೇಕು. ಇದಕ್ಕೆ ಸಂಬಂಧಿಸಿ ಪಾಕಿಸ್ತಾನ ವಾಯು ಪಡೆ ಕಾರ್ಯತಂತ್ರ ರೂಪಿಸುತ್ತಿದೆ. ಕ್ಷಿಪಣಿಯನ್ನು ಹೊಡೆದುರುಳಿಸಿಲ್ಲ. ಅದಾಗೆ ಭೂಭಾಗದ ಮೇಲೆ ಅಪ್ಪಳಿಸಿ ಪತನಗೊಂಡಿದೆ' ಎಂದು ಇಫ್ತಿಕರ್‌ ತಿಳಿಸಿದ್ದಾರೆ.

'ನಾವು ಸಂಪೂರ್ಣವಾಗಿ ಸಿದ್ಧಗೊಂಡಿದ್ದೇವೆ. ಜಲಾಂತರ್ಗಾಮಿ ಮತ್ತು ಕ್ಷಿಪಣಿಯಂತಹ ವಸ್ತುವನ್ನು ಪತ್ತೆ ಮಾಡಿದ್ದೇವೆ. ಎಲ್ಲವನ್ನೂ ಗಮನಿಸುತ್ತಿದ್ದೇವೆ' ಎಂದು ಇಫ್ತಿಕರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.