ADVERTISEMENT

ಟ್ರಸ್ಟ್‌ಗಳಿಂದ ಉಗ್ರರಿಗೆ ಹಣ:ಮುಂಬೈ ದಾಳಿ ರೂವಾರಿ ಹಫೀಸ್‌ ವಿರುದ್ಧ ಪಾಕ್‌ ಕೇಸ್‌

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 3:12 IST
Last Updated 4 ಜುಲೈ 2019, 3:12 IST
   

ಲಾಹೋರ್‌: ಭಯೋತ್ಪಾದನಾ ಸಂಘಟನೆಗಳಿಗೆ ಪೂರೈಕೆಯಾಗುತ್ತಿರುವಹಣಕಾಸು ನೆರವನ್ನು ನಿರ್ಬಂಧಿಸುವಂತೆ ಜಾಗತಿಕವಾಗಿ ಕೇಳಿ ಬರುತ್ತಿರುವ ಒತ್ತಾಯಕ್ಕೆ ಮಣಿದಿರುವ ಪಾಕಿಸ್ತಾನ, 26/11ರ ಮುಂಬೈ ದಾಳಿರೂವಾರಿ, ‘ಜಮಾತ್‌ ಉದ್‌ ದವಾ’ (ಜೆಯುಡಿ)ಸಂಘಟನೆಯಹಫೀಸ್‌ ಸಯೀದ್ ಸೇರಿದಂತೆ ಆತನ 12 ಸಹಚರರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಭಯೋತ್ಪಾದನಾ ಸಂಘಟನೆಗಳಿಗೆ ಮತ್ತು ಉಗ್ರಗಾಮಿಗಳಿಗೆ ಹಣ ಪೂರೈಕೆ ಮಾಡುತ್ತಿರುವ ಆರೋಪದ ಅಡಿ ಹಫೀಸ್‌ ಸಯೀದ್‌ ವಿರುದ್ಧ ಪಾಕಿಸ್ತಾನದಉಗ್ರ ನಿಗ್ರಹ ವಿಭಾಗ (ಸಿಟಿಡಿ) 23 ಪ್ರಕರಣದಾಖಲಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಿಟಿಡಿ, ‘ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವ ಸಲುವಾಗಿಯೇ ಜೆಯುಡಿ ಮುಖ್ಯಸ್ಥ ಹಫೀಸ್‌ ಸಯೀದ್‌ ಐದು ಟ್ರಸ್ಟ್‌ಗಳನ್ನು ರಚಿಸಿದ್ದಾನೆ. ಅದರ ಮೂಲಕ ಹಣ ಸಂಗ್ರಹಿಸಿ ಆರ್ಥಿಕ ನೆರವು ನೀಡುತ್ತಿದ್ದ. ಇದೇ ಕಾರಣಕ್ಕಾಗಿಯೇ ಹಫೀಸ್‌ಸಯೀದ್‌ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಆಸ್ತಿ ಗಳಿಕೆ ಬಗ್ಗೆ ನಾವು ತನಿಖೆ ಮಾಡಲಿದ್ದೇವೆ,’ ಎಂದು ತಿಳಿಸಿದೆ. ‌

ADVERTISEMENT

‘ಅಲ್‌–ಅನ್ಫಾಲ್‌’, ‘ದವಾತ್‌ ಉಲ್‌ ಈರ್ಷದ್‌’, ‘ಮೌಜ್‌ ಬಿನ್‌ ಜಬಾಲ್‌’, ‘ಅಲ್‌ ಹಮಾದ್‌’, ‘ಅಲ್‌ ಮದೀನಾ ಫೌಂಡೇಷನ್‌’ ಮೂಲಕ ಆಸ್ತಿ ಗಳಿಸಿ, ಅವುಗಳ ಮೂಲಕ ಹಫೀಸ್‌ ಭಯೋತ್ಪಾದನೆಗೆ ಆರ್ಥಿಕ ನೆರವುನೀಡುತ್ತಿದ್ದ. ಈ ಸಂಬಂಧ ಲಾಹೋರ್‌, ಗುಜರನ್‌ವಾಲಾ ಮತ್ತು ಮುಲ್ತಾನ್‌ಗಳಲ್ಲಿ ಜೆಯುಡಿ ಮುಖ್ಯಸ್ಥ ಹಫೀಸ್‌, ಲಷ್ಕರ್‌ ಎ ತೋಯ್ಬಾ ಮತ್ತು ಫಲ್ಹಾ ಇ ಇನ್ಸಾಯಿತ್‌ ಸಂಘಟನೆಯ ಮುಖ್ಯಸ್ಥರ ಮೇಲೆ 23 ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.